Janardhan Kodavoor/ Team KaravaliXpress
29.6 C
Udupi
Saturday, July 2, 2022
Sathyanatha Stores Brahmavara

ಉಡುಪಿ ಡಿಸಿಐಬಿ ಪೊಲೀಸರಿಂದ ಗಾಂಜಾ ಮಾರಾಟಗರರ ಬಂಧನ

ಉಡುಪಿ : ಉಡುಪಿ ಜಿಲ್ಲೆಯ ಡಿಸಿಐಬಿ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಮಾದಕವಸ್ತುಗಳನ್ನು ವಶಪಡಿಸಿ​ ​ಕೊಂಡಿದ್ದಾರೆ.​ ಬಂಧಿತ ಆರೋಪಿಗಳಾದ ಕುಂದಾಪುರದ ಮಹ್ಮದ್ ತನ್ವೀರ್ ಹಾಗೂ ಸಬೀಬ್ ಎಂದು ತಿಳಿದು ಬಂದಿದೆ.​ ಒಂದು ಕೆಜಿ ಐವತ್ತು ಗ್ರಾಂ ಗಾಂಜಾ ಮತ್ತು 2 ಮೊಬೈಲ್ ಫೋನ್ ಆರೋಪಿಗಳ ಬಳಿ ವಶಪಡಿಸಿ ಕೊಂಡಿದ್ದಾರೆ.

ಉಡಪಿ ಜಿಲ್ಲಾ ಪೊಲೀಸ್ ಅಧೀಕ್ಷರಾದ ವಿಷ್ಣುವರ್ಧನ್, ಕುಮಾರ್ ಚಂದ್ರ, ಟಿ.ಆರ್ ಜಯಶಂಕರ್‌ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ‌ ಇನ್ಸ್ಪೆಕ್ಟರ್ ಮಂಜಪ್ಪ ಹಾಗೂ ಎಎಸ್ಐ ರವಿಚಂದ್ರ ಮತ್ತು ಅವರ ಸಿಬ್ಬಂದಿಗಳಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ್,​ ​ಸಂತೋಷ ಕುಂದರ್,ರಾಘವೇಂದ್ರ ಉಪ್ಪುಂದ,​ ​ರಾಜ್ ಕುಮಾರ್, ದಯಾನಂದ ಪ್ರಭು,​ ​ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಕಾರ್ಯಚರಣೆಯಲ್ಲಿ‌ ಭಾಗವಹಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!