ಹಾಡಹಗಲೇ ನಡೆದ ಗ್ಯಾಂಗ್ ವಾರ್; ವಿದ್ಯಾರ್ಥಿ ಸಾವು!

ಹಾಡಹಗಲೇ ನಡೆದ ಗ್ಯಾಂಗ್ ವಾರ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಮಂಗಳವಾರ ತಡ ರಾತ್ರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಲೆಯಾದ ವಿದ್ಯಾರ್ಥಿ ನಗರದ ಕಾಲೇಜೊಂದರಲ್ಲಿ ಓದುತ್ತಿದ್ದ ಮೊಹಮ್ಮದ್ ಮುದ್ದಸೀರ್ (19) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಛೋಟಾ ರೋಜಾ ಬಡಾವಣೆಯ ಬೌವುಲಿಗಲ್ಲಿಯ ಅಮಿರ್ ಗುಲಶನ್ ಫಂಕ್ಷನ್ ಹಾಲ್ ಹತ್ತಿರ ಆರೋಪಿಗಳು ವಿದ್ಯಾರ್ಥಿ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಪರಾರಿಯಾಗಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುದ್ದಸೀರ್ ನನ್ನು ನಗರದ ಮಣೂರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ತಡ ರಾತ್ರಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply