ಫೇಸ್ ಬುಕ್ ದೋಖಾ- ಸೌಂಧರ್ಯಕ್ಕೆ ಮರಳಾಗಿ- 35 ಲಕ್ಷ ಪಂಗನಾಮ

ಬೆಂಗಳೂರು- ಸುರ ಸುಂದರ ಹುಡುಗಿಯರು ನಿಮಗೆ ಫೇಸ್ ಬುಕ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಎಸ್ ಅಂದರೆ ಸಾಕು ಕಥೆ ಮುಗಿಯಿತು. ತಮ್ಮ ಸೌಂಧರ್ಯ ಹಾಗೂ ಚಾಟಿಂಗ್ ಬೆಣ್ಣೆ ಮಾತಿಗೆ ಮರಳಾಗುತ್ತಿದ್ದೀರಾ ಅಂತ ಅವರಿಗೆ ತಿಳಿದರೆ ಸಾಕು ನಿಮ್ಮಿಂದ ಲಕ್ಷ ಲಕ್ಷ ಹಣ ದೋಚುವ ಪ್ಲಾನ್ ಮಾಡುತ್ತಾರೆ. ಹೀಗೆ ಫೇಸ್ ಬುಕ್ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ ವಿದೇಶ ಯುವತಿಯ ಸ್ನೇಹ ಬೆಳೆಸಿದ ಬೆಂಗಳೂರಿನ ವ್ಯಕ್ತಿಯೊಬ್ಬ ಬರೋಬರಿ 35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ನ್ಯಾನ್ಸಿ ವಿಲಿಯಂ ಎಂಬಾಕೆ ಬೆಂಗಳೂರಿನ ಖಾಸಗಿ ಕಂಪನಿಯ ಮ್ಯಾನೇಜರ್ ಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಶಿಫ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ಇದಕ್ಕೆ ಆ ವ್ಯಕ್ತಿ ಎಸ್ ಅಂತ ಹೇಳಿ ಆಕೆಯ ಸ್ನೇಹ ಮಾಡಿದ್ದಾನೆ. ನಾನು ಮೂಲತಃ ಇಂಗ್ಲೆಂಡ್ ನವಳು ಎಂದು ಪರಿಚಯ ಮಾಡಿಕೊಂಡ ಆಕೆ ಫೋನ್ ನಂಬರ್ ಎಕ್ಸ್ ಚೆಂಜ್ ಮಾಡಿಕೊಂಡಿದ್ದಾಳೆ. ವಾಟ್ಸ್ ಆ್ಯಪ್ ನಲ್ಲಿ ಚಾಟಿಂಗ್ ಮಾಡಲು ಶುರು ಮಾಡಿಕೊಂಡಿದ್ದಾಳೆ. ದಿನದಲ್ಲಿ ಬಹಳಷ್ಟು ಸಮಯ ಆತ ಆಕೆಯ ಚಾಟಿಂಗ್ ನಲ್ಲೆ ಕಾಲ ಕಳೆಯುತ್ತಿದ್ದನು.

ತರುವಾಯ ಆತನನ್ನು ಖೆಡ್ಡಾಗೆ ಬೀಳಿಸಲು ನ್ಯಾನ್ಸಿ ವಿಲಿಯಂ ಸ್ಕೆಚ್ ಹಾಕಿದ್ದಾಳೆ. ನಾನು ಭಾರತಕ್ಕೆ ಬರುತ್ತೇನೆ, ಅಲ್ಲಿ ಬಂದು ಬ್ಯೂಸಿನೆಸ್ ಮಾಡೋಣ ಅಂತ ಪ್ರಪೋಸಲ್ ಕೊಟ್ಟಿದ್ದಾಳೆ. ಇದಕ್ಕೆ ಆತ ಎಸ್ ಅಂತ ಹೇಳಿದ್ದಾನೆ.
ಬ್ಯೂಸಿನೆಸ್ ಗಾಗಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದಾಳೆ. ಅವಳ ಬೆಣ್ಣೆ ಮಾತಿಗೆ ಮರಳಾಗಿ ಹಂತ ಹಂತವಾಗಿ 35 ಲಕ್ಷ ರೂಪಾಯಿಗಳನ್ನು ಆಕೆಯ ಬ್ಯಾಂಕ್ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿದ್ದಾನೆ. ಹಣ ಹೆಚ್ಚಾಗಿ ಸೇರಿತು ಎಂದು ತಿಳಿದೊಡನೆ ಆಕೆ ಫೇಸ್ ಬುಕ್ ಖಾತೆಯನ್ನೆ ಡಿಲೀಟ್ ಮಾಡಿದ್ದಾಳೆ.

ಈಗ 35 ಲಕ್ಷ ರೂಪಾಯಿ ಕಳೆದುಕೊಂಡ ಆ ವ್ಯಕ್ತಿ ಬೆಂಗಳೂರಿನ ಪೂರ್ವ ವಿಭಾಗದ ಸಿಇಎನ್ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ.

 
 
 
 
 
 
 
 
 
 
 

Leave a Reply