ಬೆಂಗಳೂರು: ಅವಳಹಳ್ಳಿಯಲ್ಲಿ ಮಂಡ್ಯ ಮೂಲದ ವ್ಯಕ್ತಿಯೊಬ್ಬರು, ಹೆಂಡತಿ ಹಣಕ್ಕಾಗಿ ಪೀಡಿಸುತ್ತಾಳೆ ಎಂಬ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿ ಯಾಗಿದೆ. ಮೃತ ವ್ಯಕ್ತಿ ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಎಂದು ಗುರುತಿಸಲಾಗಿದೆ.
ಅಣ್ಣಯ್ಯ ಬಾರೊಂದರಲ್ಲಿ ಕ್ಯಾಶಿಯರ್ ಆಗಿದ್ದು, ಇವರು 5 ವರ್ಷ ಹಿಂದೆ ಉಮಾ ಎಂಬಾಕೆಯನ್ನು ಮದುವೆಯಾಗಿದ್ದು, ಗಂಡ ಹೆಂಡತಿಯ ನಡುವೆ ಯಾವಾಗಲೂ ಹಣದ ವಿಚಾರಕ್ಕೆ ಜಗಳ ನಡೆ ಯುತ್ತಿತ್ತು.
ಇದರಿಂದ ಬೇಸತ್ತ ಅರುಣ್ ಜೀವನದಲ್ಲಿ ನೆಮ್ಮದಿಯ ಇಲ್ಲದಾಗಿದೆ . ನನ್ನ ಸಾವಿಗೆ ನಾನೇ ಕಾರಣ ನನ್ನ ಆಂತ್ಯ ಸಂಸ್ಕಾರವನ್ನು ನನ್ನ ಅಕ್ಕ ಮತ್ತು ಕುಟುಂಬದವರು ಮಾಡಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.