ಕೊಚ್ಚಿ: ಕೇರಳದ ಅಕ್ರಮ ಚಿನ್ನ ಸಾಗಾಣಿಕೆ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಭೂಗತ ದೊರೆ ದಾವೂದ್ ಇಬ್ರಾಹಿಂ ಆ ರಾಜತಾಂತ್ರಿಕ ಪಾರ್ಸೆಲ್ ಮೂಲಕ ಕೋಟ್ಯಂತರ ರೂ.ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದ ಹಿಂದಿರ ಬಹುದೆಂಬ ಬಲವಾದ ಅನುಮಾನ ರಾಷ್ಟ್ರೀಯ ತನಿಖಾ ಸಂಸ್ಥೆ ವ್ಯಕ್ತಪಡಿಸಿದೆ.
ಈ ಪ್ರಕರಣದ ಏಳು ಆರೋಪಿಗಳ ಜಾಮೀನು ಅರ್ಜಿಯನ್ನು ಬುಧವಾರದಂದು ಎನ್ಐಎ ನ್ಯಾಯಾಲಯ ಪರಿಶೀಲಿಸುತ್ತಿದ್ದ ಸಂದರ್ಭ ಸಂಸ್ಥೆ ಈ ಅನುಮಾನ ವ್ಯಕ್ತಪಡಿಸಿದೆ. ಆರೋಪಿಗಳಾದ ರಮೀಝ್ ಕೆ.ಟಿ. ಮತ್ತು ಶರ್ಫುದ್ದೀನ್ ಜಾನಿಯಾಗೆ ತೆರಳಿದ್ದರು. ಅಲ್ಲಿ ಬಂದೂಕು ಅಂಗಡಿಗೆ ಭೇಟಿ ನೀಡಿದ್ದು ರಮೀಝ್ ಅಲ್ಲೇ ವಜ್ರದಂಗಡಿಯೊಂದನ್ನು ತೆರೆಯಲು ಲೈಸೆನ್ಸ್ಗೆ ಪ್ರಯತ್ನ ನಡೆಸಿದ್ದನು.
ನಂತರ ಆತ ಚಿನ್ನವನ್ನು ಅಲ್ಲಿಂದ ಕೊಲ್ಲಿಗೆ ತಂದು ಅಲ್ಲಿಂದ ಕೇರಳಕ್ಕೆ ಕಳ್ಳಸಾಗಣೆ ನಡೆಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಿ ತಾಂಜಾನಿಯಾದಲ್ಲಿ ಶರ್ಫುದ್ದೀನ್ ರೈಫಲ್ ಹೊಂದಿದ್ದ ಫೋಟೋವನ್ನು ಎನ್ಐಎ ಪ್ರಾಸಿಕ್ಯೂಟರ್ ಅರ್ಜುನ್ ಅಂಬಲಪಟ್ಟ ಕೋರ್ಟ್ಗೆ ಹಾಜರುಪಡಿಸಿದರು.
ಇನ್ನು ಭೂಗತ ದೊರೆ ದಾವೂದ್ ಗ್ಯಾಂಗ್ ಸಕ್ರಿಯವಾಗಿರುವುದು ದುಬೈ ಮತ್ತು ತಾಂಜಾನಿಯಾದಲ್ಲಿ. ಜಾನಿಯಾದಲ್ಲಿ ದಾವೂದ್ನ ವ್ಯವಹಾರ ನೋಡಿಕೊಳ್ಳುತ್ತಿರೋದು ದ.ಭಾರತದ ಫಿರೋಜ್ ಓಯಸಿಸ್ ಎಂಬುವನು. ಹಾಗಾಗಿ ರಮೀಝ್ಗೆ ದಾವೂದ್ ಜತೆ ನಿಕಟ ಸಂಬಂಧವಿರುವ ಸಂಶಯವಿದೆ.ಇದಲ್ಲದೆ 13.22 ಎಂಎಂ ಸಾಮರ್ಥ್ಯದ ರೈಫಲ್ಗಳನ್ನು ಕಳ್ಳಸಾಗಣೆ ಮಾಡಿದ ಆರೋಪದಡಿ ಕಳೆದ ವರ್ಷ ನವೆಂಬರ್ನಲ್ಲಿ ಈತನ ಬಂಧನವಾಗಿತ್ತು ಎಂದು ಪ್ಯಾಸಿಕ್ಯೂಟರ್ ಹೇಳಿದರು.
ಮತ್ತೋರ್ವ ಆರೋಪಿ ಮುಹಮ್ಮದ್ ಆಲಿಗೆ ಐಎಸ್ ಮತ್ತು ಸಿಮಿ ಜತೆ ನಿಕಟ ಸಂಪರ್ಕವಿದೆ. ಸಿರಿಯಾದಲ್ಲಿರುವ ಐಎಸ್ ಸದಸ್ಯರ ಫೋಟೋವೊಂದು ದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು,ಈ ಪತ್ರಿಕೆಯ ಕ್ಲಿಪ್ಪಿಂಗ್ ಆಲಿಯ ಮೊಬೈಲ್ನಲ್ಲಿ ಪತ್ತೆಯಾಗಿದ್ದು, ಇದೇ ಕಾರಣಕ್ಕೆ ಈತನನ್ನು ಬಂಧಿಸಿ ಕ್ಲಿಪ್ಲಿಂಗ್ನ್ನು ನ್ಯಾಯಾಲಯಕ್ಕೆ ನೀಡಲಾಯಿತು.
ಆರೋಪಿ ಝಾಕಿರ್ ನಾಯ್ಕ್ನ ಫೋಟೋ ಪ್ರಮುಖ ಆರೋಪಿ ಸ್ವಪ್ನಾಳ ಮೊಬೈಲ್ನಲ್ಲಿ ದೊರೆತಿತ್ತು. ಭಾರತೀಯ ಮತ್ತು ವಿದೇಶೀ ಕರೆನ್ಸಿಗಳ ಬಂಡಲ್ಗಳ ಫೋಟೋ ಕೂಡಾ ಹೊನ್ನಾಳಿ ಮೋಬೈಲ್ ನಲ್ಲಿ ಸಿಕ್ಕಿದೆ ಎಂದ ಅಂಬಲಪಟ್ಟ, ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಹಣ ನೀಡುವ ಕುರಿತು ಹಣಕಾಸು ಕ್ರಿಯಾ ಕಾರ್ಯಪಡೆ ಕಳೆದ ವರ್ಷವೇ ವರದಿ ಸಲ್ಲಿಸಿದೆ ಎಂದು ಹೇಳಿದರು.
ಆದ್ದರಿಂದ ಈ ಪ್ರಕರಣದ ವಿಸ್ತೃತ ತನಿಖೆ ಅಗತ್ಯ ಮತ್ತು ಇದು ಸಾಮಾನ್ಯ ಕಳ್ಳಸಾಗಣೆ ಪ್ರಕರಣವೆಂದು ಪರಿಗಣಿ ಸಕೂಡದು ಎಂದು ಸಹಾಯಕ ಸಾಲಿಸಿಟರ್ ಜನರಲ್ ಪಿ.ವಿಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಎರಡು ದಿನ ಎನ್ಐಎ ಕಸ್ಟಡಿಯಲ್ಲಿದ್ದ ಆರೋಪಿಗಳಾದ ಅಬು ಪಿ.ಟಿ., ಮುಹಮ್ಮದ್ ಆಲಿ, ಶರ್ಫುದ್ದೀನ್ ಕೆ.ಟಿ., ಮುಹಮ್ಮದ್ ಶಫೀಕ್, ಹಮ್ಜದ್ ಆಲಿಗೆ ನ್ಯಾಯಾಲಯ ನ್ಯಾಯಾಂಗ ಬಂಧನವನ್ನು ವಿಧಿಸಿದೆ.