ಕುಂದಾಪುರದ ಕಳ್ಳತನ ಪ್ರಕರಣದ ಆರೋಪಿ ದಂಪತಿಗಳು ಅರೆಸ್ಟ್ / ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ 

ಕುಂದಾಪುರ  ತಾಲೂಕು  ಬೀಜಾಡಿ ಗ್ರಾಮದ  ಬೀಪಾನ್‌ ಬೆಟ್ಟು  ರಸ್ತೆಯಲ್ಲಿರುವ  ಜಯರಾಜ್‌ ಶೆಟ್ಟಿಯವರು  ತನ್ನ ಹೆಂಡತಿಯ ತಂದೆಯ ಅಂತ್ಯ ಸಂಸ್ಕಾರದಲ್ಲಿ  ಪಾಲ್ಗೊಳ್ಳಲು  ಮನೆಗೆ  ಬೀಗ  ಹಾಕಿ  ಹೋಗಿದ್ದ ಸಮಯದಲ್ಲಿ​, ರಾತ್ರಿ ಮನೆಯ ಬೀಗ ಮುರಿದು ಮನೆಯೊಳಗೆ  ಇರಿಸಿದ್ದ  ಸುಮಾರು  ರೂ   9,88,500/- ಮೌಲ್ಯದ   ಚಿನ್ನ ಹಾಗೂ ಬೆಳ್ಳಿಯ  ಆಭರಣಗಳು  ಕಳವು  ಆಗಿದ್ದು  ಈ ಬಗ್ಗೆ  ಜಯರಾಜ್‌  ಶೆಟ್ಟಿಯವರು  ನೀಡಿರುವ  ದೂರಿನಂತೆ ಕುಂದಾ ಪುರ  ಠಾಣೆಯಲ್ಲಿ ಅ.ಕ್ರ. 123/2020 ಕಲಂ 454, 457, 380 ಐಪಿಸಿಯಂತೆ ಪ್ರಕರಣವು ದಾಖಲಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿ ದಿನಾಂಕ  12.11.2020  ರಂದು   ರಾಜೇಶ ನಾಯ್ಕ @ ರಾಜ @ ರಾಜು ಪಾಮಡಿ ಪ್ರಾಯ ೪೨ ​ವರ್ಷ ತಂದೆ ದಿವಂಗತ​, ​ವಿಠಲ ನಾಯ್ಕ ವಾಸ:  ಇಂದ್ರಾಳಿ, ​ದುರ್ಗಾ ನಗರ, ​ದುರ್ಗಾ ಪರಮೇಶ್ವರಿ ದೇವಸ್ಥಾನದ  ಹತ್ತಿರ,  ಮಂಚಿ ಪೋಸ್ಟ್, ಉಡುಪಿ ​ಹಾಗು ​ ಟೋಲ್‌ನಾಕಾ, ಜನತ್ ನಗರ, ಧಾರವಾಡ 2ನೇ ಅಡ್ಡ ರಸ್ತೆ, ಧಾರವಾಡ    ತಾಲೂಕು  ಮತ್ತು ಜಿಲ್ಲೆ  ಹಾಗೂ ಆತನ  ಹೆಂಡತಿ, ಪದ್ಮ ಪಾಮಡಿ ಪ್ರಾಯ 37 ​ವರ್ಷ  ಗಂಡ :- ರಾಜೇಶ ನಾಯ್ಕ @ ರಾಜ @ ರಾಜು ಪಾಮಡಿ ಟೋಲ್‌ನಾಕಾ, ಜನತ್ ನಗರ , ಧಾರವಾಡ 2 ನೇ ಅಡ್ಡ ರಸ್ತೆ, ಹುಬ್ಬಳಿ ಧಾರವಾಡ  ಜಿಲ್ಲೆ   ಎಂಬವರನ್ನು ದಸ್ತಗಿರಿ ಮಾಡಿ   ಅಪಾದಿತರು  ಕುಂದಾಪುರ,   ಉಡುಪಿ ನಗರ,  ಮಣಿಪಾಲ,  ಗಂಗೊಳ್ಳಿ,  ದಾರಾವಾಢ ನಗರ   ಠಾಣಾ  ಸರಹದ್ದಿನಲ್ಲಿ ಕಳುವು ಮಾಡಿರುವ    ಒಟ್ಟು ೨೦೨  ಗ್ರಾಂ  ತೂಕದ ಚಿನ್ನ  ಹಾಗೂ  ಒಟ್ಟು 1ಕೆಜಿ. 683 ಗ್ರಾಂ  ಬೆಳ್ಳಿ,  2 ದ್ವಿಚಕ್ರ ವಾಹನಗಳನ್ನು   ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.  

ಅಪಾದಿತ  ರಾಜೇಶ್ @ ರಾಜ  @  ರಾಜು  ಉಡುಪಿ ಇಂದ್ರಾಳಿಯವನಾಗಿದ್ದು  ಈತನ  ಹೆಂಡತಿ ಧಾರವಾಡ ದಳಾಗಿರುತ್ತಾಳೆ.  ಈ  ಮೊದಲು   ಕಾಪು   ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ   ಕಳ್ಳತನ  ನಡೆಸಿ ಜೈಲಿನಲ್ಲಿದ್ದವನು ಕಳೆದ ಜುಲೈ 2020ರಲ್ಲಿ  ಜಾಮೀನು   ಮೇಲೆ  ಬಿಡುಗಡೆಗೊಂಡು   ಬಂದ  ಬಳಿಕ   ತನ್ನ  ಹೆಂಡತಿಯೊಂದಿಗೆ ಸೇರಿಕೊಂಡು    ಕುಂದಾಪುರ,  ಸುರತ್ಕಲ್‌, ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮರ‍್ಡೇಶ್ವರ, ​ಗೊಕರ್ಣ, ಕುಮಟಾ, ಹೊನ್ನಾವರ​,​  ಕಾರಾವಾರದಲ್ಲಿ  ಮನೆ   ಹಾಗೂ ದೇವಸ್ಥಾನಗಳಲ್ಲಿ   ಮತ್ತು,​ ​ದೈವಸ್ಥಾನದಲ್ಲಿ  ಕಳವು ಮಾಡಿರುವುದಾಗಿ  ವಿಚಾರಣೆ ವೇಳೆ  ತಿಳಿಸಿರುತ್ತಾನೆ.

ಉಡುಪಿ ಜಿಲ್ಲಾ  ಪೊಲೀಸ್  ಅಧೀಕ್ಷಕರಾದ  ಶ್ರೀ​ವಿಷ್ಣುವರ್ಧನ್ ಐಪಿಎಸ್. ರವರ  ಅದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ  ಶಂಕರ್‌  ಐಪಿಎಸ್  ರವರ ​ಮಾರ್ಗದರ್ಶನದಲ್ಲಿ ಕುಂದಾಫುರ  ವೃತ್ತ ನಿರೀಕ್ಷಕ  ಶ್ರೀ  ಗೋಪಿಕೃಷ್ಣ  ಕೆ.ಆರ್‌  ರವರು  ಈ  ಪ್ರಕರಣದಲ್ಲಿ   ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿ ವಶದಲ್ಲಿದ್ದ ಹಾಗೂ ಧಾರಾವಾಡ ಜುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಾಧೀನ​ ​ಪಡಿಸಿಕೊಂಡಿದ್ದು ಅಪಾದಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.  

​ಕಾರ್ಯಾಚರಣೆಯಲ್ಲಿ  ಕುಂದಾಪುರ  ಠಾಣಾ  ಪಿ.ಎಸ್‌.ಐ.  ಸದಾಶಿವ  ಗವರೋಜಿ.  ಕುಂದಾಪುರ  ಸಂಚಾರ ಠಾಣಾ  ಪಿ.ಎಸ್.ಐ. ​ಸೂರ್ಯನ್, ಶಂಕರನಾರಾಯಣ  ಪಿ.ಎಸ್.ಐ. ಶ್ರೀಧರ  ನಾಯ್ಕ  ಹಾಗೂ ಸಿಬ್ಬಂದಿ ಯವರಾದ   ಮಂಜುನಾಥ,  ಸಂತೋಷ,   ರಾಘವೇಂದ್ರ,​ ​ಸಿದ್ದಪ್ಪ   ವೃತ್ತ ಕಚೇರಿಯ ಸಿಬ್ಬಂದಿಯವರಾದ  ಸೀತಾರಾಮ,  ವಿಕ್ಟರ್‌ ,  ಗುರುರಾಜ್‌ ,  ಉದಯ​,​  ಮಹಿಳಾ  ಸಿಬ್ಬಂದಿಯವರಾದ ಬೇಬಿ, ಚಂದ್ರಾವತಿ,​ ​ಅಶ್ರೀತಾ  ಮತ್ತು ಚಾಲಕರಾದ   ಸಂತೋಷ ಪಾಲ್ಗೊಂಡಿರುತ್ತಾರೆ.

​​

​​

 
 
 
 
 
 
 
 
 
 
 

Leave a Reply