ಲಕ್ಷಾಂತರ ಮೌಲ್ಯದ ಗೇರುಬೀಜ ಕಳ್ಳತನ-ಇಬ್ಬರು ಆರೋಪಿಗಳ ಬಂಧನ

ಬ್ರಹ್ಮಾವರ: ಗೇರು ಬೀಜ ಫ್ಯಾಕ್ಟರಿಗಳ ಬೀಗ ಮುರಿದು ಸಂಗ್ರಹಿಸಿಟ್ಟ ಗೋಂಡಂಬಿಯನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕು ಇಂದಿರಾ ನಗರ ನಿವಾಸಿ ಸೈಯದ್ ಮೊಹಮ್ಮದ್ ಬಶೀರ್(37) ಮತ್ತು ಬಂಟ್ವಾಳ ಮಿತ್ತೂರು ನಿವಾಸಿ ಉಮ್ಮರ್ ಫಾರೂಕ್ (36) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 26ರಂದು ಬ್ರಹ್ಮಾವರ ಹೊಸೂರು ಕೆಳಕರ್ಜೆಯಲ್ಲಿರುವ ವಿನಾಯಕ ಕ್ಯಾಶ್ಯೂಸ್ ಗೇರು ಬೀಜದ ಕಾರ್ಖಾನೆಯ ಸೈಡಿನ ಬಾಗಿಲನ್ನು ಬಲತ್ಕಾರದಿಂದ ಮೀಟಿ ಮೇಲೆತ್ತಿ ಅಲ್ಲದೇ ಒಳಗಿನ ಬಾಗಿಲನ್ನು ಕಾರಿನ ಜಾಕಿನಂತ ವಸ್ತುಗಳನ್ನು ಬಳಸಿ ಒಳಗೆ ಪ್ರವೇಶಿಸಲು ಶಟರ್ ಬಾಗಿಲನ್ನು ಮೇಲೇ ಪ್ರಯತ್ನಿಸಿದ ಬಗ್ಗೆ ಮತ್ತು ಚೇರ್ಕಾಡಿ ಗ್ರಾಮದ ಮುಂಡ್ಕಿನ್ ಜೆಡ್ಡು ಎಂಬಲಿ “ವಿಜಯದುರ್ಗಾ’ ಎಂಬ ಗೇರು ಬೀಜ ಕಾರ್ಖಾನೆಯ ಶಟ್ಸ್ನ್ನು ಯಾವುದೋ ವಸ್ತುವಿನಿಂದ ಮೀಟಿ ತೆರೆದು ಒಳ ಹೊಕ್ಕಿ ಗೇರು ಬೀಜ ಸಂಗ್ರಹಿಸಿಟ್ಟಿದ್ದ ಸ್ಟಾಕ್ ರೂಮ್ನಲ್ಲಿರುವ 1 ಡಬ್ಬ 10 ಕೆಜಿಯ ತೂಗುವ 140000/- ಮೌಲ್ಯದ ಗೇರುಬೀಜ ಕಳ್ಳತನ ಮಾಡಿದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬ್ರಹ್ಮಾವರ ಪೊಲೀಸ್ ಠಾಣಾ ಮೇಲಿನ ಎರಡು ಪ್ರಕರಣವನ್ನು ಬೇಧಿಸಲು ಹಾಗೂ ಹೆಬ್ರಿ ಪೊಲೀಸ್ ಠಾಣೆ ಮತ್ತು ಅಜೆಕಾರು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಇದೇ ಮಾದರಿಯ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಉಡುಪಿ ಜಿಲ್ಯಾ, ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ರವರ ಮಾರ್ಗದರ್ಶನದಂತೆ ಜೈಶಂಕರ್, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗರವರ ಹಾಗೂ ಅನಂತ ಪದ್ಮನಾಭ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ರವರ ನಿರ್ದೇಶನ ದಂತೆ ಇಬ್ಬರು ಆರೋಪಿಗಳನ್ನು ದಕ ಜಿಲ್ಲೆಯ ಪುತ್ತೂರಿನಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ, ಸಿ, ಅವರ ವಿಶೇಷ ತಂಡ ಪತ್ತೆ ಹಚ್ಚಿ ಬಂಧಿಸಿರುತ್ತಾರೆ.

ಈ ಆರೋಪಿಗಳ ವಿರುದ್ಧ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ಮತ್ತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಇದೇ ಮಾದರಿಯ ಪ್ರಕರಣ ಗಳು ದಾಖಲಾಗಿರುತ್ತದೆ.ಬಂಧಿತ ಆರೋಪಿತರಿಂದ ಈಗಾಗಲೇ ಕೃತ್ಯಕ್ಕೆ ಮತ್ತು ಪರಾರಿಯಾಗಲು ಉಪಯೋಗಿಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಅಂದಾಜು ಮೌಲ್ಯ ನಾಲ್ಕು ಲಕ್ಷ (4,00,000/-) ಹಾಗೂ ಕಳವು ಮಾಡಿದ ಗೇರು ಬೀಜದ ಡಬ್ಬ ಒಟ್ಟು ಮೌಲ್ಯ ರೂ 1,40, 000/- ಹಾಗೂ ಆರೋಪಿಗಳ ವಶದಲ್ಲಿದ್ದ 63 ಮೊಬೈಲ್ ಫೋನ್ ಗಳು ಅಂದಾಜು ಮೌಲ್ಯ ರೂ 12, 000/- ಒಟ್ಟು ಸುಮಾರು 5,52, 000/- (ಐದು ಲಕ್ಷದ ಐವತ್ತೆರಡು ಸಾವಿರ ರೂಪಾಯಿ) ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಹೆಚ್ಚಿನ ತನಿಖೆ ಬಗ್ಗೆ ಪೊಲೀಸ್ ಕಸ್ಮಡಿ ಪಡೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆ ಯಲ್ಲಿ, ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ರಾಘವೇಂದ್ರಸಿ, ಅವರೊಂದಿಗೆ ಬ್ರಹ್ಮಾವರ ಪೊಲೀಸ್ ಠಾಣಾ ಸಿಬ್ಬಂದಿ ಗಳಾದ ಎಎಸ್,ಐ ಶಾಂತರಾಜ್, ಎಎಸ್,ಐ ಗೋಪಾಲ ಪೂಜಾರಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ, ರಾಘವೇಂದ್ರ ಕಾರ್ಕಡ, ಸಂತೋಷ್ ಶೆಟ್ಟಿ, ಗಣೇಶ ದೇವಾಡಿಗ, ದಿಲೀಪ್ ಕುಮಾರ, ಚಾಲಕ ಅಣ್ಣಪ್ಪ, ಪತ್ತೆ ಹಚ್ಚುವಲ್ಲಿ, ಸಹಕರಿಸಿರುತ್ತಾರೆ.

 
 
 
 
 
 
 
 
 
 
 

Leave a Reply