ಉಡುಪಿಯಲ್ಲಿ ನಿಷೇಧಿತ ಬ್ರೌನ್ ಶುಗರ್ ಪತ್ತೆ-ಆರೋಪಿ ಅಂದರ್ 

ಉಡುಪಿ: ನಿಷೇಧಿತ ಮಾದಕ ವಸ್ತುಗಳಾದ​ ​ಉಡುಪಿಯಲ್ಲಿ ನಿಷೇಧಿತ ಬ್ರೌನ್ ಶುಗರ್ ಪತ್ತೆ ಯಾಗಿದೆ. ಬ್ರಹ್ಮಾವರದ ಮಹಮ್ಮದ್ ಫಜಲ್ ಬಂಧಿತ ಆರೋಪಿ. ಆತ ಉಡುಪಿಯ ಫರ್ಹಾನ್ ಮತ್ತು ಸಫಾ ಜೊತೆ ಸೇರಿ ಡ್ರಗ್ಸ್ ಮಾರಾಟಕ್ಕೆ ಸಂಚು ರೂಪಿಸಿದ್ದ. ಮಣಿಪಾಲದ ಆರ್.ಟಿ.ಒ. ಕಚೇರಿ ಬಳಿಯ ಎಂಡ್ ಪಾಯಿಂಟ್ ​ಸಮೀಪ ಫರ್ಹಾನ್ ಹಾಗೂ ಸಫಾಗಾಗಿ ಕಾಯುತ್ತಿದ್ದ.​ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು, ಆತನನ್ನು ಬಂಧಿಸಿದ್ದಾರೆ. 
 
ಆತನ ಬಳಿ 54 ನಿಷೇಧಿತ ಎಂಡಿಎಂಎ ಮಾತ್ರೆಗಳು, 30 ಗ್ರಾಂ ಬ್ರೌನ್ ಶುಗರ್ ಪತ್ತೆಯಾಗಿದೆ. ವಶಕ್ಕೆ ಪಡೆದ ಮಾದಕ ವಸ್ತುಗಳ ಅಂದಾಜು ಮೌಲ್ಯ 4,62,000-00 ರೂ.ಗಳಾಗಿವೆ.ಬಂಧಿತ ಆರೋಪಿ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ ಮಾತ್ರೆ ಹಾಗೂ ಬ್ರೌನ್ ಶುಗರ್ ಅನ್ನು ಆನ್‍ಲೈನ್ ಮೂಲಕ ತರಿಸುತ್ತಿದ್ದ. ಅವುಗಳನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ.​ 
 
ದಾಳಿಯನ್ನು ಉಡುಪಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಐಪಿಎಸ್​,​ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಕುಮಾರ ಚಂದ್ರ​. ​ಕೆ ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕ ಜೈ ಶಂಕರ್ ಅವರ ಮಾರ್ಗ ದರ್ಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಕುಂದಾಪುರ ವಿಭಾಗದ ​ಹರಿರಾಮ ಶಂಕರ್ ಐಪಿಎಸ್ ಇವರ ನೇತೃತ್ವದಲ್ಲಿ ಸಹಾಯ ಕಂಟ್ರೋಲರ್ ನಾಗರಾಜ್​,​ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಎನ್ ಗೌಡ​,​ ಪಿಎಸ್ಐ ರಾಜಶೇಖರ ವಂದಲಿ ​​ಎಎಸ್ಐ​ ಶೈಲೇಶ​​ ಪ್ರಸನ್ನ​,​ ಥಾಮ್ಸನ್​,​ ಆದರ್ಶ​,​ ಸುದೀಪ್ ರವರು ಭಾಗವಹಿಸಿರುತ್ತಾರೆ
 
 
 
 
 
 
 
 
 
 
 

Leave a Reply