ವಾಕಿಂಗ್ಎಂದು ಹೋದ ಯುವತಿಯರು ಹೆಣವಾದರು

ಬೆಳಗಾವಿ: ಯುವತಿಯರಿಬ್ಬರನ್ನು ನಗರದ ಹೊರವಲಯದಲ್ಲಿ ಕೊಲೆ ಮಾಡಲಾದ ಅಮಾನುಷ ಘಟನೆಯೊಂದು ನಡೆದಿದೆ. ಮೃತ ದುರ್ದೈವಿ ಗಳನ್ನು ಬೆಳಗಾವಿಯ ಶಿಂಧೊಳ್ಳಿ ಹಾಗೂ ಸುಳಗಾ ಗ್ರಾಮದ ರೋಹಿಣಿ (21) ಹಾಗೂ ರಾಜಶ್ರೀ (21) ಎಂದು ಗುರುತಿಸಲಾಗಿದೆ. 

ಈ ಘಟನೆ ಬೆಳಗಾವಿಯ ಹೊರವಲಯದ ಮಚ್ಚೆ ಗ್ರಾಮದ ಲಕ್ಷ್ಮೀ ನಗರದಲ್ಲಿ ನಡೆದಿದ್ದು, ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 15 ದಿನದ ಹಿಂದೆ ಲಕ್ಷ್ಮಿ ನಗರದಲ್ಲಿ ಮನೆ ಬಾಡಿಗೆಗೆ ಪಡೆದಿದ್ದು ಅಲ್ಲಿ ವಿವಾಹಿತ ಯುವತಿಯರು ತಮ್ಮ ಗಂಡಂದಿರೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದರು.

ಶನಿವಾರ ಸಂಜೆ ವಾಕಿಂಗ್ ಎಂದು ಹೊರಗಡೆ ತೆರಳಿದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.ವಿ ಷಯ ತಿಳಿಯುತ್ತಲೆ ಅಲ್ಲಿಗೆ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

 
 
 
 
 
 
 
 
 
 
 

Leave a Reply