ಸ್ವಪ್ನಾ ಸುರೇಶ್ ಜಾಮೀನು ತಿರಸ್ಕರಿಸಿದ ಎನ್​ಐಎ ನ್ಯಾಯಾಲಯ

ಕೇರಳದ ಚಿನ್ನ ಕಳ್ಳಸಾಗಾಣಿಕೆ ಆರೋಪದಲ್ಲಿ ಸಿಲುಕಿರುವ ಸ್ವಪ್ನಾ ಸುರೇಶ್ ಹಾಗೂ ಇತರ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಮಾರ್ಚ್ 22 ರಂದು ತಿರಸ್ಕರಿಸಿದೆ.

ಈ ಪ್ರಕರಣದ ತನಿಖೆ ಕೊನೆಯಾಗಿದ್ದು, ಆರೋಪಿಗಳು ದೀರ್ಘಕಾಲದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂಬ ಕಾರಣಕ್ಕೆ ಜಾಮೀನು ಕೋರಿ ಆರೋಪಿಗಳು ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಜೊತೆಗೆ, ಆರೋಪಿಗಳ ವಿರುದ್ಧದ ಆಪಾದನೆಗಳು ಕಾನೂನಿನ ಎದುರು ಸ್ಥಿರವಾಗಿಲ್ಲ ಎಂದೂ ಹೇಳಿದ್ದರು.

ಪ್ರಕರಣದ ಕೆಲವು ಆರೋಪಿಗಳಿಗೆ ಈ ಹಿಂದೆಯೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ದಳ ಹೈಕೋರ್ಟ್​ಗೆ ಮನವಿ ಸಲ್ಲಿಸಿತ್ತು. ಆ ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು. ಈ ವಿವರಗಳನ್ನು ಸ್ವಪ್ನಾ ಸುರೇಶ್ ಹಾಗೂ ಇತರ ಆರು ಆರೋಪಿಗಳು ತಮ್ಮ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

 

 
 
 
 
 
 
 
 
 
 
 

Leave a Reply