ಕಾರೊಳಗೇ ಯುವತಿ ಮೇಲೆ ಅತ್ಯಾಚಾರವೆಸಗಿದ ಪಾಪಿ ಹರ್ಷ 

ನೆಲಮಂಗಲ: ಉದ್ಯೋಗದ ಸಂಬಂಧ ಮಾತುಕತೆಗೆಂದು ಯುವತಿಯೊಬ್ಬಳಿಗೆ ಬರಹೇಳಿದ ಯುವಕನೊಬ್ಬ, ಆಕೆಯ ಮೇಲೆ ಕಾರೊಳಗೇ ಅತ್ಯಾಚಾರ ಎಸಗಿದ ಪ್ರಕರಣವೊಂದು ನಡೆದಿದೆ.

 ಪ್ರಕರಣ ಸಂಬಂಧ ಯುವತಿಯು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಯ ಮೇಲೆ ಕೇಸು ದಾಖಲಾಗಿದೆ. 25 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹರ್ಷ ಗೌಡ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.

ಕೆಲಸದ ವಿಷಯವಾಗಿ ಜ. 16ರಂದು ಹರ್ಷ ಆ ಯುವತಿಗೆ ಬರಲು ಹೇಳಿದ್ದ. ನಂತರ ಮಾಕಳಿ ಸಮೀಪದ ವೀರೂಸ್ ಢಾಬಾ ಆ್ಯಂಡ್ ರೆಸ್ಟೋರೆಂಟ್ ಬಳಿ ಕರೆದೊಯ್ದು, ಅಲ್ಲಿಗೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕಾರೊಳಗೇ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ

 
 
 
 
 
 
 
 
 
 
 

Leave a Reply