ಬೈಂದೂರು ಕಾರು, ವ್ಯಕ್ತಿ ಸುಟ್ಟ ಪ್ರಕರಣ: ನಾಲ್ವರು ಆರೋಪಿಗಳು ಅಂದರ್

ಬೈಂದೂರು ಹೇನ್‌ಬೇರು ರಸ್ತೆಯಲ್ಲಿ ಬುಧವಾರ ಮುಂಜಾನೆ ಬೆಳಕಿಗೆ ಬಂದ ಕಾರು ವ್ಯಕ್ತಿ ಸುಟ್ಟು ಹೋಗಿರುವ ಪ್ರಕರಣ ಮಹತ್ವದ ಟ್ವಿಸ್ಟ್ ಪಡೆದಿದೆ.ಇದೊಂದು ವ್ಯವಸ್ಥಿತ ಕೊಲೆ ಆಗಿದ್ದು ಆರೋಪಿಗಳನ್ನು 24 ಗಂಟೆಯೊಳಗೆ ಬೈಂದೂರು ಪೊಲೀಸರು ಬಂಧಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೃತ ಪಟ್ಟಿರುವ ವ್ಯಕ್ತಿಯನ್ನು ಆನಂದ ದೇವಾಡಿಗ (55) ಕಾರ್ಕಳ ಎಂದು ಗುರುತಿಸಲಾಗಿದೆ.

ಕೊಲೆ ಆರೋಪಿಗಳಾದ ಸದಾನಂದ ಶೇರೆಗಾರ್(52) ಹಾಗೂ ಶಿಲ್ಪಾ ಪೂಜಾರಿ (30) ಅನೈತಿಕ ಸಂಬಂಧ ಹೊಂದಿದ್ದು ಹಳೆಯ ಪ್ರಕರಣದಲ್ಲಿ ಸದಾನಂದ ಶೇರೆಗಾರ್ ಬಂಧನ ಭೀತಿ ಹೊಂದಿದ್ದ ಹೀಗಾಗಿ ಕ್ರೈಂ ಸ್ಟೋರಿ ಒಂದರಲ್ಲಿ ನೋಡಿದ ಕಥೆಯಂತೆ ತಾನೇ ಸತ್ತುಹೋಗಿರುವ ಸುದ್ದಿ ಬಿಂಬಿಸಲು ಸ್ವಂತ ಕಾರಿನಲ್ಲಿ ತನ್ನದೇ ವ್ಯಕ್ತಿತ್ವ ಹೋಲುವ ವ್ಯಕ್ತಿಯನ್ನು ಪ್ರಿಯತಮೆಯಾದ ಶಿಲ್ಪಾ ಪೂಜಾರಿ ಮೂಲಕ ಬಲೆಗೆ ಬೀಳಿಸಿದ್ದಾನೆ.ಕಾರ್ಕಳದಲ್ಲಿ ಕಂಠಪೂರ್ತಿ ಕುಡಿಸಿ ವಯಾಗ್ರಿ ಮಾತ್ರೆ ಎಂದು ನಿದ್ರೆ ಮಾತ್ರ ನೀಡಿ ಕಾರಿನಲ್ಲಿ ಕುಳ್ಳಿಸಿಕೊಂಡು ಬಂದು ಹೇನ್‌ಬೇರು ರಸ್ತೆ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.ಮೇಲ್ನೋಟಕ್ಕೆ ಕೊಲೆಯಂತೆ ಭಾಸವಾದ ಪ್ರಕರಣವನ್ನು ಬೆನ್ನಟ್ಟಿದ್ದ ಬೈಂದೂರು ಪೊಲೀಸರು ಕಾರಿನ ಮಾಲಕನಾದ ಸದಾನಂದ ಶೇರೆಗಾರ್ ಕುಟುಂಬದ ವಿವರ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳು ಬೆಂಗಳೂರಿಗೆ ಪ್ರಯಾಣಗೈಯಲು ಹೊರಟಿದ್ದು ಮಾರ್ಗ ಮದ್ಯದಿಂದ ವಾಪಾಸ್ಸು ಬಂದಿದ್ದರು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಮತ್ತು ಹೆಚ್ಚಿನ ವಿವರಗಳನ್ನು ಆರಕ್ಷಕರು ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ವ್ಯಕ್ತಿ ಆನಂದ ದೇವಾಡಿಗ (55)

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ನಿರ್ದೇಶನದಲ್ಲಿ ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ,ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಠಾಣಾಧಿಕಾರಿ ಪವನ್ ನಾಯ್ಕ,ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ,ಕ್ರೈಂ ವಿಭಾಗದ ಮೋಹನ ಪೂಜಾರಿ,ನಾಗೇಂದ್ರ,ಕೃಷ್ಣ ದೇವಾಡಿಗ,ಶ್ರೀನಿವಾಸ,ಶಾಂತಾರಾಮ ಶೆಟ್ಟಿ,ಚಾಲಕ ಚಂದ್ರ ಪೂಜಾರಿ,ಗಂಗೊಳ್ಳಿ ಆರಕ್ಷಕ ಠಾಣೆಯ ಚಂದ್ರಶೇಖರ,ಶ್ರೀಧರ,ಪ್ರಿನ್ಸ್ ಕೆ.ಜೆ ಶಿರೂರು ಮುಂತಾದವರು ಕಾರ್ಯಚರಣೆಯಲ್ಲಿ ಭಾಗವಹಿಸಿದರು.

 
 
 
 
 
 
 
 
 
 
 

Leave a Reply