ಬೆಂಗಳೂರು : ನಗರದಲ್ಲಿ ಯುವಕರ ತಂಡವೊಂದು ಬಾಂಗ್ಲಾ ಮೂಲದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ.ಆ ಘಟನೆಯಲ್ಲಿ 3 ಯುವತಿ ಸೇರಿ 7 ಆರೋಪಿಗಳನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ಥೆ ಮತ್ತು ಆರೋಪಿಗಳು ಬಾಂಗ್ಲಾ ದೇಶದ ಮೂಲದವರು ಎಂದು ತಿಳಿದು ಬಂದಿದೆ.ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿಗಳು, ರಾಮಮೂರ್ತಿ ನಗರದ ಎನ್ ಆರ್ ಐ ಕಾಲೋನಿಯಲ್ಲಿ ವಾಸವಾಗಿದ್ದರು, ಆರೋಪಿಗಳು ವೇಶ್ಯಾವಾಟಿಕೆ ದಂದೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ವೈಶ್ಯಾವಾಟಿಕೆಗೆ ಸಹಕರಿಸಿಲ್ಲ ಎಂದು ಸಂತ್ರಸ್ಥೆ ಮೇಲಿನ ದ್ವೇಷದಿಂದ ರಿಫಾತುಲ್ಲಾ ಇಸ್ಲಾಂ ಹಾಗು ಆತನ ಸಹಚರರು ಟಾರ್ಚರ್ ಕೊಟ್ಟು ಗ್ಯಾಂಗ್ ರೇಪ್ ನಡೆಸಿದ್ದಾರೆ. ಓರ್ವ ಯುವತಿ ಜತೆಗೆ ನಾಲ್ವರ ಯುವಕರಿಂದ ಕೃತ್ಯ ನಡೆದಿದೆ. ಲೈಂಗಿಕ ಮತ್ತು ದೈಹಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ ವಿಕೃತಿ ಮೆರೆದಿದ್ದರು. ಬಾಂಗ್ಲಾ ದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು.
ಅಸ್ಸಾಂ ರಾಜ್ಯದ ಪೊಲೀಸರಿಂದ ವಿಡಿಯೋ ಕುರಿತು ತನಿಖೆ ನಡೆಯುತ್ತಿದೆ. ಕೃತ್ಯದಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಭಾಗಿಯಾರುವುದು ಬೆಳಕಿಗೆ ಬಂದಿದೆ. ಬಾಂಗ್ಲಾ ದೇಶದ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಆ ಬಳಿಕ ಸಂತ್ರಸ್ಥೆ ಕುಟುಂಬದ ಸದಸ್ಯರನ್ನ ಪತ್ತೆಮಾಡಿದ್ದ ಬಾಂಗ್ಲಾ ಪೊಲೀಸರು, ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆವಲಹಳ್ಳಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿರುವುದು ಪತ್ತೆ ಹಚ್ಚಿ ಪೊಲೀಸರು ಬಂಧನ ಮಾಡಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿದ ರಾಮಮೂರ್ತಿ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.