Janardhan Kodavoor/ Team KaravaliXpress
24.6 C
Udupi
Sunday, July 3, 2022
Sathyanatha Stores Brahmavara

ಬುಲೆಟ್ ಬೈಕ್ ಗಳ  ಕರ್ಕಶ ಸೈಲೆನ್ಸರ್ ಕಿತ್ತೆಸೆದ ಪೊಲೀಸರು

ಕಳೆದೆರಡು ತಿಂಗಳಿನಿಂದ ಉಡುಪಿಯಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವ ವಾಹನ ಸವಾರರನ್ನು ಪೊಲೀಸರು ಭರ್ಜರಿ ಬೇಟೆ ಯಾಡಿದ್ದಾರೆ. ಸಾರ್ವಜನಿಕರ ಮನವಿಯಂತೆ,ಇದರಲ್ಲಿ ಬಹು ಮುಖ್ಯವಾಗಿದ್ದ ಬುಲೆಟ್ ಬೈಕ್ ಗಳ ಕರ್ಕಶ ಸದ್ದನ್ನು ನಿಲ್ಲಿಸಿದ್ದಾರೆ. ಅದೆಷ್ಟೋ ಯುವಕರು ತಮ್ಮ ಬುಲೆಟ್ ಬೈಕ್ ಗಳಿಗೆ 3,000/- ದಿಂದ 10,000/- ದವರೆಗೂ ಹಣ ವ್ಯಯಿಸಿ ಕರ್ಕಶ ಶಬ್ದದ ಸೈಲೆನ್ಸರ್ ಗಳನ್ನು ಅಳವಡಿಸಿಕೊಂಡಿದ್ದು, ಹೀಗಾಗಿ ಉಡುಪಿಯಲ್ಲಿ ಸದಾ ಈ ಬೈಕ್ ಗಳ ಸದ್ದು ಕೇಳಿಬರುತ್ತಿತ್ತು.

ಇದರ ಕುರಿತು ಸಾರ್ವಜನಿಕರು ನೀಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ನಗರ ಸಂಚಾರ ಠಾಣೆ ಉಪ ಪೊಲೀಸ್ ನಿರೀಕ್ಷಕ ಅಬ್ದುಲ್ ಕಾದರ್ ರವರು ಇದರ ವಿರುದ್ಧ ನಿಂತಿದ್ದಾರೆ. ಕೇವಲ ಕಳೆದ ಎರಡು ತಿಂಗಳಿನಲ್ಲಿ ಅತೀ ಕರ್ಕಶ ಶಬ್ದ ಹೊರಡಿಸುತ್ತಿದ್ದ ಸುಮಾರು 111 ಬುಲೆಟ್ ಬೈಕ್ ಗಳ ಸೈಲೆನ್ಸರ್ ಗಳಿಗೆ ವಿದಾಯ ಹೇಳಿಸಿ, ದಂಡವನ್ನು ವಿಧಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಗರದ ಸಂಚಾರ ಠಾಣೆ 111 ಬುಲೆಟ್ ಸವಾರರಿಂದ 55 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.

ಇನ್ನು ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಿದ 405 ಕೇಸಿನಿಂದ 2.2 ಲಕ್ಷ ರೂಪಾಯಿ ದಂಡ ವಸೂಲಿಯಾಗಿದ್ದು ಇದಲ್ಲದೆ ಕಾರಿನ ಟಿಂಟ್ ಗ್ಲಾಸ್ ಸಂಬಂಧಿಸಿ 102 ಪ್ರಕರಣಗಳು ಸಿಕ್ಕಿದ್ದು 57 ಸಾವಿರ ದಂಡ ಸಂಗ್ರಹವಾಗಿದೆ, ಇದರೊಂದಿಗೆ ಹೆಲ್ಮೆಟ್ ನಿಯಮಗಳನ್ನು ಪಾಲಿಸದಿದ್ದ ಹಾಗೂ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಒಟ್ಟು 42 ಪ್ರಕರಣ ದಾಖಲಿಸಿ 21 ಸಾವಿರ ದಂಡ ವಸೂಲಿ ಮಾಡಲಾಗಿದೆ.

ಟ್ರಾಫಿಕ್ ಪೊಲೀಸರು ಸಂಚಾರ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿ ಜನಪರ ಕಾರ್ಯನಿರ್ವಹಿಸುತ್ತಿದ್ದಾರೆ. ವಾಹನ ಸವಾರರು ಮೋಟಾರು ವಾಹನ ಕಾಯ್ದೆ ನಿಯಮಗಳನ್ನು ಪಾಲಿಸಬೇಕು. ಉಡುಪಿ ನಗರ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ವ್ಯವಸ್ಥೆ ಸುಗಮ ವಾಗಿರಬೇಕು. ಸಾರ್ವಜನಿಕರು ಬುಲೆಟ್ ಸೌಂಡ್, ಸಂಚಾರ ನಿಯಮ ಪಾಲಿಸದ ವಾಹನಗಳನ್ನು ಗಮನಿಸಿದಲ್ಲಿ ವಾಹನ ಸಂಖ್ಯೆ, ವಿವರ ಸಮೇತ ಭಾವಚಿತ್ರ ತೆಗೆದು ಸಂಚಾರ ವಿಭಾಗದ ವಾಟ್ಸಪ್ ಸಂಖ್ಯೆ 9480805446ಗೆ ಸಂದೇಶ ಕಳಿಸುವ ಮೂಲಕ ಮಾಹಿತಿ ಕೊಡಬಹುದು. ಕೂಡಲೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ನಗರ ಸಂಚಾರ ಠಾಣೆಯ ಎಸ್‌ಐ ಅಬ್ದುಲ್ ಖಾದರ್ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!