Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಅಯ್ಯಪ್ಪನ ಹೆಸರಿನಲ್ಲಿ ಸೋಗಪ್ಪಧಾರಿಗಳು

ಉಡುಪಿ: ಇಲ್ಲಿನ ಕೊಳಲಗಿರಿ ಉಪ್ಪೂರು ಲಕ್ಷ್ಮೀನಗರ ಸಂತೆಕಟ್ಟೆ ಬಳಿ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ಸೋಗಿನಲ್ಲಿ ವಂತಿಗೆ ಸಂಗ್ರಹಿಸುತ್ತಿದ್ದ ವೇಷಧಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಯ್ಯಪ್ಪ ಭಕ್ತವೃಂದ ಆದಿ ಉಡುಪಿ ಬೈಪಾಸ್ (ರಿ.) ಹೆಸರಿನಲ್ಲಿ 2000 ರೂಪಾಯಿ ವಂತಿಗೆ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಶಿವಮೊಗ್ಗ ಮೂಲದ ನಾಲ್ವರು ಅಯ್ಯಪ್ಪ ವ್ರತಾಧಾರಿಗಳ ವೇಷ ಧರಿಸಿ, ಕೊಳಲಗಿರಿ ಬಳಿ ದೀಪಾರಾಧನೆ, ಅನ್ನದಾನಕ್ಕೆ 2,000 ರೂಪಾಯಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಆದಿ ಉಡುಪಿ ಅಯ್ಯಪ್ಪ ಭಕ್ತ ವೃಂದ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ದೇವರ ಮುಂದೆ ನಿಲ್ಲಿಸಿ ಕ್ಷಮೆಯಾಚಿಸಿ, ಲಕ್ಷ್ಮೀನಗರ ಅಯ್ಯಪ್ಪ ಶಿಬಿರದ ಹುಂಡಿಗೆ ಸಂಗ್ರಹವಾಗಿದ್ದ ವಂತಿಗೆ ಹಾಕಿಸಿದ್ದಾರೆ. ವ್ರತಾಧಾರಿಗಳ ಹೆಸರಿನಲ್ಲಿ ವಂತಿಗೆ ಸಂಗ್ರಹ‌ ಮಾಡದಂತೆ, ಅಯ್ಯಪ್ಪ ವ್ರತಾಧಾರಿಗಳ ಹೆಸರು ಕೆಡಿಸದಂತೆ ತಾಕೀತು ಮಾಡಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!