Janardhan Kodavoor/ Team KaravaliXpress
24.6 C
Udupi
Friday, December 2, 2022
Sathyanatha Stores Brahmavara

ಕುಡಿದ ಮತ್ತಿನಲ್ಲಿ ಕಾರು ಚಾಲನೆ; ಎರಡು ಕಾರುಗಳು ಜಖಂ

ಉಡುಪಿ: ಕುಡಿದ ಮತ್ತಿನಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಒಬ್ಬರಿಗೆ ಗಾಯ ಹಾಗೂ ಎರಡು ಕಾರುಗಳು ಜಖಂಗೊಂಡ ಘಟನೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಬ್ಯಾರೆಲ್ಸ್ ಪಬ್ ಬಳಿ ನಡೆದಿದೆ. ಇನ್ನು ಅವಾಂತರಕ್ಕೆ ಕಾರಣನಾದ ಚಾಲಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರು ಚಾಲಕ ಸುಹಾಸ್ ಹಾಗೂ ಆತನ ಕಾರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತ ಮದ್ಯ ಸೇವಿಸಿರುವುದು ದೃಢಪಟ್ಟಿದ್ದು, ಇತರೆ ಪರೀಕ್ಷೆಗೂ ಒಳಪಡಿಸಲಾಗಿದೆ. ಅಲ್ಲದೆ ಕಾರಿನಲ್ಲಿದ್ದ ಇವರ ಸ್ನೇಹಿತರಾದ ಭರತ್, ನವೀನ್ ಕಲ್ಯಾಣ್, ನಿರ್ಮಲ, ಕವನ ಎಂಬವರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ.

ಕಾರು ಅಪಘಾತದಿಂದ ಪಬ್ ನೌಕರ ವಿಕ್ರಾಂತ್ ಎಂಬವರು ಗಾಯಗೊಂಡಿದ್ದು, ಪಾರ್ಕಿಂಗ್ ನಲ್ಲಿದ್ದ ಸ್ಕೋಡಾ ಮತ್ತು ಪಾರ್ಚೂನರ್ ಕಾರುಗಳು ಜಖಂಗೊಂಡಿವೆ. ಇವೆಲ್ಲರೂ ಬೆಂಗಳೂರು ಮತ್ತು ಶಿವಮೊಗ್ಗದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಐಟಿ ಸೆಕ್ಟರ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇವರು ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು, ರಾತ್ರಿ ಬ್ಯಾರೆಲ್ಸ್ ಪಬ್ ಗೆ ಆಗಮಿಸಿದ್ದರೆನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!