Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಸಂಜನಾ, ರಾಗಿಣಿ ಸಹಿತ ಆರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಸಹಿತ 6 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


6 ಆರೋಪಿಗಳ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ವಿಡಿಯೋ ಕಾನ್ಫರೇನ್ಸ್‌ ಮೂಲಕ ಜಡ್ಜ್‌ ಮುಂದೆ ಹಾಜರು ಪಡಿಸಲಾಗಿತ್ತು. ಸಧ್ಯ ಕೋರ್ಟ್‌ ತನ್ನ ತೀರ್ಪು ನೀಡಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಈ ಬಗ್ಗೆ ಎಸಿಎಂಎಂ ನ್ಯಾಯಾಲಯ ತೀರ್ಪು ನೀಡಿದ್ದು, 12 ದಿನಗಳ ಕಸ್ಟಡಿ ನಂತರ ನಟಿ ರಾಗಿಣಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇನ್ನು ಈ ಆರೋಪಿಗಳು ವಿಚಾರಣಾ ಖೈದಿಗಳಾಗಿ ಪರಪ್ಪನ ಅಗ್ರಹಾರ ಸೇರಲಿದ್ದಾರೆ.


ಇನ್ನು ನಟಿ ರಾಗಿಣಿ ಅವರ ಜಾಮೀನು ಅರ್ಜಿ ಬುಧವಾರದವರೆಗೆ ಮುಂದೂಡಿಕೆ wಯಾಗಿದೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!