ಡ್ರಗ್ಗಿಣಿಯರಿಗೆ ನಾಳೆ ಜೈಲೋ.. ಬೇಲೋ!? 

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಪೊಲೀಸ್‌ ಕಸ್ಟಡಿ ನಾಳೆಗೆ ಮುಗಿಯಲಿದ್ದು, ನಾಳೆ 1ನೇ ಎಸಿಎಂಎಂ ಕೋರ್ಟಿಗೆ ಸಿಸಿಬಿ ಪೊಲೀಸರ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿದ್ದಾರೆ. ನಾಳೆ ಎನ್‍ಡಿಪಿಎಸ್ ಕೋರ್ಟಿಗೆ ನಟಿ ಸಂಜನಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಇದರ ನಡುವೆ ಪೊಲೀಸರು ಮತ್ತೆ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಕೇಳಿಕೊಳ್ಳುವ ಸಾಧ್ಯತೆ ಇದ್ದು, ಒಂದು ವೇಳೆ ನಾಳೆ ಮತ್ತೆ ಪೊಲೀಸರು ವಶಕ್ಕೆ ಪಡೆದುಕೊಂಡ್ರೆ ತನಿಖೆ ಮತ್ತೊಂದು ಅಯಾಮದಲ್ಲಿ ನಡೆಯಲಿದೆ .

ಈಗಾಗಲೇ ಇಬ್ಬರು ಪೊಲೀಸರಿಗೆ ಸರಿಯಾದ ರೀತಿಯಲ್ಲಿ ವಿಚಾರಣೆಗೆ ಸ್ಪಂದಿಸದ ಕಾರಣ ಜಾಮೀನು ಸಿಗುವ ಸಾಧ್ಯತೆ ತೀರ ಕಡಿಮೆಯಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಜೈಲಿಗೆ ಕಳುಹಿಸಿ ಮತ್ತೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಒಟ್ಟಿನಲ್ಲಿ ನಾಳೆ ಇಬ್ಬರಿಗೆ ಜೈಲೋ, ಪೋಲಿಸರ ಕಸ್ಟಡಿ , ಅಥವಾ ಜಾಮೀನೊ  ಅಂತ ಕಾದು ನೋಡಬೇಕಾಗಿದೆ.

Leave a Reply