Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಕೋಸ್ಟಲ್ ಎಸ್ಪಿ ಹೆಸರಲ್ಲಿ ಫೇಕ್ ಖಾತೆ :ವಂಚನೆಗೆ ಯತ್ನ

ಉಡುಪಿ: ಈಗಾಗಲೇ ರಾಜ್ಯದ ನಾನಾ ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚನೆ ಮಾಡುವ ಜಾಲ ವ್ಯವಸ್ಥಿತವಾಗಿದೆ. ಇದೀಗ ಉಡುಪಿ ಯಲ್ಲಿಯೂ ಇಂತಹ ಸೈಬರ್ ಕ್ರೈಂ ಘಟನೆಯೊಂದು ನಡೆದಿದೆ.


ಉಡುಪಿಯ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಚೇತನ್ ಕುಮಾರ್ ಆರ್. ಫೋಟೋ ಬಳಸಿ ದುಷ್ಕರ್ಮಿಗಳು ನಕಲಿ‌ ಫೇಸ್‌ಬುಕ್ ಖಾತೆ ತೆರೆದಿದ್ದು, ಇದನ್ನು ಶುಕ್ರವಾರವಷ್ಟೇ ತೆರೆಯಲಾಗಿದೆ. ಖಾತೆ ತೆರೆದ ಅರ್ಧ ಘಂಟೆಯಲ್ಲೇ ದುಷ್ಕರ್ಮಿಗಳ ಈ ದುಷ್ಕೃತ್ಯ ತಿಳಿದು ಬಂದಿದೆ.


ಕೋಸ್ಟಲ್ ಎಸ್ಪಿ-ಎಸ್.ಪಿ. ಸಿಂಗ್ ಹೆಸರಲ್ಲಿ ಫೇಕ್ ಐಡಿ ಸೃಷ್ಟಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಲ್ಪೆಯಲ್ಲಿ ವಾಸವಿರುವುದಾಗಿ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದೆ. ಎಸ್.ಪಿ. ಸಿಂಗ್ ಎನ್ನುವ ಈ ಪ್ರೊಫೈಲ್ ಕರ್ನಾಟಕ ಕರಾವಳಿ ಕಾವಲು ಪೊಲೀಸ್ ಎಸ್ಪಿ ಅವರ ಖಾತೆ ಎಂದು ಉಲ್ಲೇಖಿಸಲಾ ಗಿದೆ. ಇನ್ನು ಇದು ಪೊಲೀಸರ ಹೆಸರಲ್ಲಿ ನಕಲಿ ಅಕೌಂಟ್ ತೆರೆದು ವಂಚಿಸುವ ಯತ್ನವಿರ ಬಹುದು ಎಂಬ ಅನುಮಾನವಿದೆ.


ಆದ್ದರಿಂದ ಸಂಪೂರ್ಣ ಘಟನೆಯ ಬಗ್ಗೆ ಸಿಎಸ್ಪಿ ಎಸ್ಪಿ ಚೇತನ್ ಕುಮಾರ್ ಅವರು ಉಡುಪಿ ಸೈಬರ್ ಕ್ರೈಂ ಮತ್ತು ಬೆಂಗಳೂರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಅಲ್ಲದೆ, ನೇರವಾಗಿ ಫೇಸ್‌ಬುಕ್ ಸಂಸ್ಥೆಗೂ ಕೂಡ ದೂರು ನೀಡಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!