ಕೂಲ್ ಆಗಿಯೇ ಇರುವ ಅಕುಲ್

ತಪ್ಪೇ ಮಾಡದ ಮೇಲೆ ಹೆದರಿಕೆ ಏಕೆ ಎಂದಿದ್ದಾರೆ

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕ ಅಕುಲ್ ಬಾಲಾಜಿಗೆ ಸಿಸಿಬಿ ಪೊಲೀಸರು ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿ ಸಿದಂತೆ ನೊಟೀಸ್ ನೀಡಿದ್ದರು.


ಅದರಂತೆ ಇದೀಗ ಸಿಸಿಬಿ ಕಚೇರಿಗೆ ಅಕುಲ್ ಬಾಲಾಜಿ ಆಗಮಿಸಿ ತನಿಖೆಗೆ ನನ್ನ ಸಹಕಾರ ಇದೆ ಎಂದಿದ್ದಾರೆ. ನನಗೂ ಈ ಡ್ರಗ್ಸ್ ಪಾರ್ಟಿ ಗಳಿಗೂ ಸಂಬಂಧವೆ ಇಲ್ಲ, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ತಪ್ಪೇ ಮಾಡಿಲ್ಲ ಎಂದ ಮೇಲೆ ಹೆದರುವುದೇನಿದೆ ಎಂದು ಹೇಳಿದ್ದಾರೆ.


ಸಿಸಿಬಿ ಕೇಳುವ ಎಲ್ಲಾ ಪ್ರಶ್ನೆಗೂ ನಾನು ಉತ್ತರಿಸುತ್ತೇನೆ. ಆರೋಪಿಗಳು ನನ್ನ ಹೆಸರು ಹೇಳಿದ್ದಾರೆ, ಆದರೆ ಆರೋಪಿಗಳ ಪರಿಚಯ ನನಗಿಲ್ಲ. ಅದಲ್ಲದೆ ನನ್ನ ಫಾರ್ಮ್ ಹೌಸ್‌ ನಲ್ಲಿ ಡ್ರಗ್ ಪಾರ್ಟಿ ನಡೆದಿದೆ ಎನ್ನಲಾಗಿದೆ. ಆದರೆ ಈ ರೀತಿ ಪಾರ್ಟಿ ನಾನು ಮಾಡಿಲ್ಲ. ಇದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಅಕುಲ್ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply