ಕಮಲಶಿಲೆ: ದನಕಳ್ಳರ ಬಂಧನ

ದಿನಾಂಕ: 16-06-2024 ರಂದು ಬೆಳಗ್ಗಿನ ಜಾವ 02:30 ಗಂಟೆಗೆ ಕಮಲಶಿಲೆ ದೇವಸ್ಥಾನ ಗೋಶಾಲೆಯ ಬಳಿ ಯಾರೋ ದನಕಳವು ಮಾಡಲು ಬಂದಿರುವುದಾಗಿ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ರಾಜುರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2024 ಕಲಂ 379 511 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸ್ ಠಾಣಾ ಪಿ.ಎಸ್.ಐ(ಕಾ&ಸು) ನಾಸೀರ್ ಹುಸೇನ್ ಮತ್ತು ಪಿ ಎಸ್ ಐ(ತನಿಖೆ) ಶಂಭುಲಿಂಗಯ್ಯ ಎಂ. ಇ ಶಂಕರನಾರಾಯಣ ಠಾಣೆ ಹಾಗೂ ಸಿಬ್ಬಂದಿಯವರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ 1) ವಾಜೀದ್ ಜೆ ಪ್ರಾಯ 26 ವರ್ಷ, ತಂದೆ: ಜಾಫರ್ ಖಾನ್, ಬಜ್ಪೆ, ಮಂಗಳೂರು, 2) ಫೈಜಲ್ ಪ್ರಾಯ 40 ವರ್ಷ, ತಂದೆ: ಅಬ್ದುಲ್ ರಜಾಕ್, ಬಜ್ಪೆ, ಮಂಗಳೂರುರವರನ್ನು ದಿನಾಂಕ: 22/06/2024 ರಂದು ದಸ್ತಗಿರಿ ಮಾಡಿ ಆರೋಪಿಗಳು ಕೃತ್ಯಕ್ಕೆ ಬಳಸಿದ ಹುಂಡೈ ಕ್ರೆಟಾ ಕಾರನ್ನು ಸ್ವಾಧೀನಪಡಿಸಿಕೊಂಡು, ದಸ್ತಗಿರಿ ಮಾಡಿದ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.

 
 
 
 
 
 
 
 

Leave a Reply