ತಂದೆಗೆ ಬೆದರಿಕೆಯ ಸಂದೇಶ~ ಮಗ ಶವವಾಗಿ ಪತ್ತೆ

ಇಸ್ಲಾಮಿಕ್‌ ಜಿಹಾದಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿರುವ ವರದಿಗಳ ಬೆನ್ನಲ್ಲೇ ಮಧ್ಯಪ್ರದೇಶ ದಲ್ಲಿ ನಡೆದ ಘಟನೆಯೊಂದು ಇಂಥಹುದೇ ಅನುಮಾನಗಳನ್ನು ಸೃಷ್ಟಿಸಿದೆ.

ಸಿಯೋನಿ-ಮಾಲ್ವಾದ ಬಿಟೆಕ್‌ ವಿದ್ಯಾರ್ಥಿಯೊಬ್ಬ ಶವವಾಗಿ ಪತ್ತೆಯಾಗಿದ್ದು ಆತನ ತಂದೆಯ ಮೊಬೈಲ್‌ ಗೆ ಇಸ್ಲಾಮಿಕ್‌ ಬೆದರಿಕೆ ಸಂದೇಶ ವೊಂದು ರವಾನೆಯಾಗಿದೆ. ವಿದ್ಯಾರ್ಥಿ ನಿಶಾಂಕ್ ರಾಥೋರ್ ರೈಲ್ವೇ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

ಪೊಲೀಸರು ಸಲ್ಲಿಸಿದ ವರದಿಯ ಪ್ರಕಾರ ರೈಲಿನಡಿಯಲ್ಲಿ ಸಿಲುಕಿ ಆತ ಮೃತಪಟ್ಟಿದ್ದಾನೆ, ಇದೊಂದು ಆತ್ಮಹತ್ಯೆ ಎಂದು ಪೋಲೀಸರು ವರದಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿಯ ತಂದೆ ತನಗೆ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಿದ್ದಾರೆ.

‘ಗುಜ್ತಾಖ್-ಎ-ನಬಿ ಕಿ ಏಕ್ ಹಿ ಸಜಾ, ಸರ್ ತನ್ ಸೆ ಜುದಾ’ (ಪ್ರವಾದಿಯವರ ವಿರುದ್ಧ ಮಾತನಾಡು ವುದಕ್ಕೆ ಒಂದೇ ಒಂದು ಶಿಕ್ಷೆ ಅದು ಶಿರಚ್ಛೇದ) ಎಂಬ ಸಂದೇಶವೊಂದು ಬಂದಿದೆ. ಇದು ಉದಯಪುರ ಟೈಲರ್‌ ಹಂತಕರು ಬಳಸಿದ್ದ ವಾಕ್ಯವೇ ಆಗಿದೆ. ಇದೀಗ ತಂದೆಗೆ ಸಂದೇಶ ಕಳುಹಿಸಿದ್ದು ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಫೋನ್‌ನಿಂದಲೇ ಸಂದೇಶ ಕಳುಹಿಸಲಾಗಿದೆ.

ಪೊಲೀಸರು ಫೋನ್‌ನಲ್ಲಿ ಫೊರೆನ್ಸಿಕ್ ವಿಶ್ಲೇಷಣೆ ನಡೆಸುತ್ತಿದ್ದಾರೆ. ತನ್ನ ಮಗ ಆತ್ಮಹತ್ಯೆ ಮಾಡಿ ಕೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಯ ತಂದೆ ಸಮರ್ಥಿಸಿಕೊಂಡಿದ್ದಾರೆ.

  • ಪೊಲೀಸರ ಪ್ರಕಾರ, ವಿದ್ಯಾರ್ಥಿಗೆ 20 ವರ್ಷ ಮತ್ತು ಸಿಯೋನಿ-ಮಾಲ್ವಾ ಸ್ಥಳೀಯ ಎನ್ನಲಾಗಿದ್ದು ,ಅವನು ತನ್ನ ಸಹೋದರಿಯನ್ನು ಭೇಟಿಯಾಗಲು ಮಧ್ಯಾಹ್ನ 3:45 ರ ಸುಮಾರಿಗೆ ಬಾಡಿಗೆಗೆ ಮನೆಯಿಂದ ತೆರಳಿದ್ದಾನೆ.
  • ಆದರೆ ವಾಪಸ್ಸಾಗಲಿಲ್ಲ. ಸಂಜೆ ತಡವಾಗಿ, ಅವರ ತಂದೆ ಮತ್ತು ಅವರ ಕೆಲವು ಸ್ನೇಹಿತರು ಬೆದರಿಕೆ ಸಂದೇಶವನ್ನು ಸ್ವೀಕರಿಸಿದ್ದಾರೆ. ಸಂದೇಶವನ್ನು ಗಮನಿಸಿದ ಅವರು ಹುಡುಕಾಟ ಪ್ರಾರಂಭಿಸಿದರು ಎನ್ನಲಾಗಿದೆ.
 
 
 
 
 
 
 
 
 

Leave a Reply