ರೈತರು ಸಾಕುವ ಮತ್ತು ಹಾಲು ಕರೆಯುವ ಜಾನುವಾರುಗಳಿಗೆ ಸಮ್ಮತಿ ಪತ್ರ ಪಡೆಯುವ ಅವಶ್ಯಕತೆ ಇಲ್ಲ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ರೈತರು ಸಾಕುವ ಮತ್ತು ಹಾಲು ಕರೆಯುವ ಜಾನುವಾರುಗಳಿಗೆ ಸಮ್ಮತಿ ಪತ್ರ ಪಡೆಯುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಇತ್ತೀಚೆಗೆ ಮಾಧ್ಯಮಗಳಲ್ಲಿ ಡೈರಿ ಫಾರಂಗಳು ಹಾಗೂ ಗೋಶಾಲೆಗಳ ಸ್ಥಾಪನೆ ಹಾಗು ನಿರ್ವಹಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಿಂದ ಸಮ್ಮತಿಸಬೇಕು ಎಂಬ ವರದಿಯಾಗಿರುವುದು ಮಂಡಳಿಗೆ ತಿಳಿದು ಬಂದಿದೆ. ರಾಷ್ಟ್ರೀಯ ಹಸಿರು ನ್ಯಾಯಾ ಧೀಕರಣವು ಅರ್ಜಿದಾರರಾದ ನುಗ್ಗೆಹಳ್ಳಿ ಜಯಸಿಂಹ ಪ್ರತಿವಾದಿ ದೆಹಲಿ ರಾಷ್ಟ್ರ ರಾಜಧಾನಿ ಪ್ರಾಂತ್ಯದ ಮೂಲ ಅರ್ಜಿಯ ಪ್ರಕರಣದಲ್ಲಿ ಡೈರಿ ಫಾರಂ ಮತ್ತು ಗೋಶಾಲೆಗಳಿಂದ ಉತ್ಪಾದನೆಯಾಗುವ ಘನ ತ್ಯಾಜ್ಯ ಮತ್ತು ಜಲ ಮಾಲಿನ್ಯವು ನದಿಗೆ ಸೇರುತ್ತಿರುವ ಬಗ್ಗೆ ವಿಚಾರಣೆ ನಡೆಸಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಚಟುವಟಿಕೆಗಳ ಪರಿಸರಾತ್ಮಕ ಅಂಶಗಳ ಕುರಿತು ಮಾರ್ಗಸೂಚಿಗಳನ್ನು ರೂಪಿಸುವಂತೆ ನಿರ್ದೇಶನ ನೀಡಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಡೈರಿ ಫಾರಂ ಹಾಗು ಗೋಶಾಲೆಗಳಲ್ಲಿ ಪರಿಸರ ನಿರ್ವಹಣೆ ಕುರಿತಾಗಿ ರೂಪಿಸಿದ ಮಾರ್ಗಸೂಚಿಗಳನ್ನು ಹಾಗೂ ರಾಜ್ಯಗಳಿಂದ ಪಡೆದು ಕ್ರೂಢೀಕರಿಸಿ ಸಲ್ಲಿಸಿದ ವರದಿ ಆಧಾರದ ಮೇಲೆ ವಿಚಾರಣೆ ನಡೆಸಲಾಗಿದೆ. ಮೇ 20, 2020 ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಲಿನ್ಯ ನಿಯಂತ್ರಣ ಮಂಡಳಿ ಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಡೈರಿ ಫಾರಂ ಹಾಗೂ ಗೋಶಾಲೆಗಳಿಂದಾಗುವ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಹಲವು ಸೂಚನೆಗಳನ್ನು ನೀಡಿದೆ.

ಇನ್ನು ಮುಂದೆ ಡೈರಿ ಫಾರಂಗಳು, 15ದಕ್ಕಿಂತ ಅಧಿಕ ಹಾಲು ಕರೆಯುವ ಪ್ರಾಣಿಗಳನ್ನು ಹೊಂದಿದ್ದಲ್ಲಿ ಮಾತ್ರ ಮಾಲಿನ್ಯ ನಿಯಂತ್ರಣ ನಿರ್ವಹಣೆಗೆ ಒಳಪಡುತ್ತವೆ. ರೈತರು ತಮ್ಮ ಮನೆಗಳಲ್ಲಿ ಸಾಕಣೆ ಮಾಡಿ ಹಾಲು ಕರೆಯುವ ಜಾನುವಾರುಗಳಿಗೆ ಈ ನಿರ್ದೇಶನವು ಅನ್ವಯವಾಗುವುದಿಲ್ಲ.

 
 
 
 
 
 
 
 
 
 
 

Leave a Reply