Covid-19, ಬಿಬಿಎಂಪಿ ಹೊಸ ಮಾರ್ಗ ಸೂಚಿ ಬಿಡುಗಡೆ

ಬೆಂಗಳೂರು: ಬಿಬಿಎಂಪಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದು, ನೂರು ಮೀಟರ್ ಅಂತರದಲ್ಲಿ ಮೂರು ಜನಕ್ಕೂ ಅಧಿಕ ಸೋಂಕಿತರಿದ್ದರೆ ಮಾತ್ರ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಬೇಕೆಂದು ನಿರ್ಧರಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಕೊರೋನಾ ಪಾಸಿಟಿವ್ ಬಂದ ತಕ್ಷಣ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗುತ್ತಿತ್ತು, ಬಾರಿಕೇಡ್, ತಗಡು, ಮರದ ಕಂಬಗಳನ್ನು ಹಾಕಿ ನೂರು ಮೀಟರ್ ಅಂತರದಲ್ಲಿ ಯಾರೂ ಓಡಾಡದಂತೆ ಮಾಡಲಾಗುತ್ತಿತ್ತು.

ಆದರೆ ಈಗ ಮಾರ್ಗಸೂಚಿ ಬದಲಾಗಿಸಲಾಗಿದೆ. ನೂರು ಮೀಟರ್ ಅಂತರದಲ್ಲಿ ಮೂರು ಅಥವಾ ಮೂರಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್‌ಗಳು ಇದ್ದರೆ ಮಾತ್ರ ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತದೆ. ಒಂದು ಅಥವಾ ಎರಡು ಕೇಸ್‌ಗಳಿದ್ದರೆ ಅಂಥ ಭಾಗದಲ್ಲಿ ಪೋಸ್ಟರ್‌ಗಳನ್ನು ಹಾಕಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಇದಕ್ಕೆ ಸಂಬಂಧ ಪಟ್ಟವರೊಂದಿಗೆ ಸಭೆ ನಡೆಸಿಯೇ ಈ ನಿರ್ಧಾರ ತೆಗೆದುಕೊಂಡಿ ರುವುದಾಗಿ ಸ್ಪಷ್ಟಪಡಿಸಿದೆ.

 
 
 
 
 
 
 
 
 
 
 

Leave a Reply