ಮತ್ತೆ ಕೋವಿಡ್ ನಿರ್ಬಂಧ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಗಿಯಾದ ನಿಯಮಗಳು

ಬೆಂಗಳೂರು: ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದರಂತೆ ಮತ್ತೆ ಶೇ. 50 ಆಸನ ಅವಕಾಶ ನಿರ್ಬಂಧವನ್ನು ಹೇರಲಾಗಿದ್ದು, ಈ ಮೂಲಕ ಎಲ್ಲ ವ್ಯಾಪಾರಸ್ಥರಿಗೆ ಮತ್ತೊಮ್ಮೆ ಕರೊನಾ ಶಾಕ್​ ಎದುರಾಗಿದೆ.

ಇದೀಗ ಉದ್ಯಮ ಕ್ಷೇತ್ರದ ಮೇಲೆ ಮತ್ತೆ ಕರಿಛಾಯೆ ಆವರಿಸುವ ಸಾಧ್ಯತೆ ಎಲ್ಲಾ ರೀತಿಯಲ್ಲೂ ಕಾಣುತ್ತಿದೆ.ಇದಲ್ಲದೆ ಶಾಲೆ, ಜಿಮ್​, ಕ್ಲಬ್​, ಪಾರ್ಟಿಹಾಲ್​, ಈಜುಕೊಳಗಳನ್ನು ಮುಚ್ಚಲು ಸೂಚಿಸಲಾಗಿದೆ. ವಿದ್ಯಾಗಮವೂ ಸೇರಿ 6ರಿಂದ 9ನೇ ತರಗತಿ ಸ್ಥಗಿತಗೊಳಿಸಲಾಗಿದೆ. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ತರಗತಿಗಳು ಮುಂದುವರಿದಿದೆ, ಆದರೆ ಹಾಜರಾತಿ ಕಡ್ಡಾಯ ಇರುವುದಿಲ್ಲ.

 ರಾಜ್ಯದಲ್ಲಿ ಹೆಚ್ಚಾಗಿ ಕರೋನಾ ಪ್ರಕರಣಗಳು ಕಂಡುಬರುತ್ತಿರುವ ಬೆಂಗಳೂರು, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಪಬ್​, ಬಾರ್​, ಕ್ಲಬ್​, ರೆಸ್ಟೋರೆಂಟ್​ ಹಾಗೂ ಚಿತ್ರಮಂದಿರಗಳಲ್ಲಿ ಗ್ರಾಹಕರ ಸಂಖ್ಯೆ ಶೇ. 50 ಮೀರುವಂತಿಲ್ಲ. ಈ ನಿರ್ಬಂಧಗಳೂ ಏಪ್ರಿಲ್ 20ರ ವರೆಗೆ ಜಾರಿಯಲ್ಲಿರಲಿವೆ.

 
 
 
 
 
 
 
 
 
 
 

Leave a Reply