ಮಂಗಳೂರಿನಲ್ಲಿ ಎಂಟು ತಿಂಗಳ ಬಳಿಕ ಮತ್ತೆ ಆರಂಭವಾದ ಪದವಿ ಕಾಲೇಜುಗಳು

ಕೊರೊನಾ ಹಿನ್ನೆಲೆ ಎಂಟು ತಿಂಗಳ ಬಳಿಕ ಪದವಿ ತರಗತಿಗಳು ಮಂಗಳವಾರ ಪುನರಾರಂಭಗೊಂಡಿವೆ. ಅನ್ ಲಾಕ್ ನ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದರೂ, ಶಾಲಾ ಕಾಲೇಜುಗಳು ಆರಂಭಗೊಂಡಿರಲಿಲ್ಲ. ಇದರ ಆರಂಭದ ಬಗ್ಗೆ ಇರುವ ಹಲವಾರು ಗೊಂದಲಗಳ ನಡುವೆ ಮಂಗಳವಾರ ಪದವಿ ಕಾಲೇಜುಗಳು ತೆರೆದಿವೆ.

ಕೆಲ ವಿದ್ಯಾರ್ಥಿಗಳು ಮೊದಲ ದಿನ ಉತ್ಸಾಹದಿಂದ ತರಗತಿಗೆ ಹಾಜರಾಗಿದ್ದು, ಮಂಗಳೂರಿನ ಬಲ್ಮಠ ಕಾಲೇಜಿನಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು. ರಥಬೀದಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂರು ವಿದ್ಯಾರ್ಥಿಗಳು ಆಗಮಿಸಿದ್ದರು. ಕೆನರಾ, ಶಾರದಾ ಕಾಲೇಜು ಸಹಿತ ನಗರದ ಬಹುತೇಕ ಪದವಿ ಕಾಲೇಜುಗಳು ಮಂಗಳವಾರ ಪುನಾರಂಭಗೊಂಡವು.

ಇನ್ನು ಕೋವಿಡ್ ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಪ್ರವೇಶ ಎಂಬ ಜಿಲ್ಲಾಡಳಿತದ ಆದೇಶದಂತೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಕೋವಿಡ್ ಪರೀಕ್ಷೆ ಪ್ರಮಾಣಪತ್ರ ಕಡ್ಡಾಯವಾಗಿತ್ತು. ಕೆಲ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಯಿತು. .

 
 
 
 
 
 
 
 
 
 
 

Leave a Reply