ದಿವ್ಯಾಂಗರಿಗೆ ಆಸರೆಯಾಗೋಣ – ವಿಜಯ್ ಕೊಡವೂರು

ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ನಡೆದ ದಿವ್ಯಾಂಗರಿಗೆ ಪ್ರತಿ ತಿಂಗಳು ನಡೆಯುವ / ದುಡಿಯಲು ಸಾಧ್ಯವಿಲ್ಲದ ದಿವ್ಯಾಂಗರಿಗೆ ಅಕ್ಕಿ / ಔಷಧಿ / ವಿಲ್ ಚೆಯರ್ / ವಾಕರ್ / ವಾಟರ್ ಬೆಡ್ ವಿತರಣೆ ಕಾರ್ಯಕ್ರಮವು ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ವಿಜಯ್ ಕೊಡವೂರು ರವರ ನೇತೃತ್ವದಲ್ಲಿ ಪಂಚಧೂಮಾವತಿ ದೈವಸ್ಥಾನ ಪರಿಸರದಲ್ಲಿ ದಿನಾಂಕ 17-03-2023 ರಂದು ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು, ಕೊಡವೂರು ವಾರ್ಡ್ ಅನ್ನು ಮೊದಲಿಗೆ ಕೊಡವೂರಿನ ಶಕ್ತಿ ಸಮಸ್ಯೆ ಸವಾಲು ಅಪೇಕ್ಷೆಗಳನ್ನು ತಿಳಿಯಲು ಸರ್ವೆಯನ್ನು ನಡೆಸಿ ಅದಕ್ಕೆ ಉತ್ತರ ಕೊಡಲು 17 ಸಮಿತಿಯನ್ನು ರಚಿಸುವ ಕಾರ್ಯವನ್ನು ಮಾಡಲಾಯಿತು. ಅದರಲ್ಲಿ ದಿವ್ಯಾಂಗರಿಗೆ ನ್ಯಾಯ ಕೊಡಬೇಕು ಎನ್ನುವ ದೃಷ್ಟಿಯಿಂದ 20 ದಿವ್ಯಾಂಗರನ್ನು ಒಟ್ಟು ಕೂಡಿಸಿ ಅದಕ್ಕೊಂದು ಸಮಿತಿಯನ್ನು ರಚನೆ ಮಾಡಲಾಗಿದೆ ಆ ಸಮಿತಿಯ ಮುಖಾಂತರ ಪ್ರತಿ ತಿಂಗಳಿಗೊಮ್ಮೆ ಕಾರ್ಯಕ್ರಮವನ್ನು ಕಾರ್ಯಕರ್ತರ ನೆರವಿನಿಂದ ದಾನಿಗಳ ಮುಖಾಂತರ ಮತ್ತು ಸಂಘ ಸಂಸ್ಥೆ ಯ ಮುಖಾಂತರ ಊರಿನ ಮನೆ ಮನೆಯಿಂದ ಗುಜಿರಿ ಸಮಾಗ್ರಿಗಳನ್ನು ಸಂಗ್ರಹಿಸಿ ಈ ರೀತಿಯ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಯಿತು. ಇಂದಿನ ದಿನ 5 ವೀಲ್ ಚೇರ್ 1 ವಾಕರ್ ವಿತರಣೆ ಮತ್ತು ಒಬ್ಬರಿಗೆ ಔಷದಿ ವಿತರಣೆ ಮತ್ತು 13 ಜನರಿಗೆ ಅಕ್ಕಿ ವಿತರಣೆ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಯಿತು. ಇಂದು ಕೊಡವೂರಿನ ಎಲ್ಲಾ ದಾನಿಗಳ ಮುಖಾಂತರ ಮದುವೆ,ಗೃಹ ಪ್ರವೇಶ, ಹುಟ್ಟುಹಬ್ಬಗಳಂಥಹ ಶುಭ ಸಂಧರ್ಬದಲ್ಲಿ ನೀಡುವ ದೇಣಿಗೆ ಮುಖಾಂತರ ನಡೆಯುತ್ತಿದ್ದೆ. ನಾನು ಎಲ್ಲರನ್ನೂ ವಂದಿಸುತ್ತೇನೆ ಅದೇ ರೀತಿ ಉಡುಪಿ ಜಿಲ್ಲೆಯ ನಾಗರಿಕರಿಗೆ ನನ್ನ ಮನವಿ ಎಲ್ಲಾ ಬೆನ್ನುಮೂಳೆ ಮುರಿತಕ್ಕೆ ಒಳಗಾದವರನ್ನು ನಾವು ಗುರುತಿಸಬೇಕು ಮತ್ತು ಅವರಿಗೆ ಸೇವೆ ಮಾಡಲು ಕೊಡವೂರು ವಾರ್ಡ್ ದಿವ್ಯಾಂಗ ರಕ್ಷಣಾ ಸಮಿತಿ ಸದಾ ಸಿದ್ಧವಾಗಿದೆ ಉಡುಪಿ ಜಿಲ್ಲೆಯ ಬೆನ್ನುಮೂಳೆ ಮೂರಿತಕ್ಕೆ ಒಳಗಾದವರು ಮತ್ತು ಅಂಗವಿಕಲರಿಗೆ ಎಲ್ಲಾ ಸೇವೆಯನ್ನು ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ವಿಜಯ್ ಕೊಡವೂರು ಕರೆ ನೀಡಿದರು.

ಈ ಸಂದರ್ಭದಲ್ಲಿ ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಹರೀಶ್ ಕೊಪ್ಪಲ್ ತೋಟ, ಏಕನಾಥ ಕೊಳ, ರಾಜೇಂದ್ರ ಕೊಡವೂರು, ಸರ್ವೋತ್ತಮ ಹೆರ್ಗ,ಜಯ ಪೂಜಾರಿ ಕಲ್ಮಾಡಿ, ಅಜಿತ್ ಬನ್ನಂಜೆ ಸ್ವಾಗತಿಸಿ ವಂದಿಸಿದರು.

Leave a Reply