ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ಗೌರವಿಸೋಣ ಸುಸಂಸ್ಕೃತ ಸಮಾಜ ನಿರ್ಮಿಸೋಣ – ವಿಜಯ್ ಕೊಡವೂರು.

ದಿನಾಂಕ 04-12-2022 ರ ಭಾನುವಾರದಂದು ವಿಶ್ವಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು “ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ” “ಮಠದಬೆಟ್ಟು ಯುವಕ ಮಂಡಲ ಮಠದಬೆಟ್ಟು” ಮತ್ತು “ಬೆಲ್—ಓ—ಸೀಲ್ ಮಜ್ಧೂರ್ ಸಂಘ ಸಂತೆಕಟ್ಟೆ” ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣಗುರು ಮಂದಿರ ಬನ್ನಂಜೆ ಇಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೆನ್ನುಮೂಳೆ ಮುರಿತಕ್ಕೋಳಗಾಗಿ ದುಡಿಯಲು ಸಾಧ್ಯವಿಲ್ಲದಂತಹ ಬಡವರಿಗೆ, ಹಾಗೂ ದುರ್ಬಲರು ಹಾಗೂ ಅಶಕ್ತರನ್ನು ಗುರುತಿಸಿ, ಅಂತಹವರಿಗೆ ಅಕ್ಕಿ ಹಾಗೂ ಔಷಧಗಳನ್ನು ವಿತರಿಸಲಾಯಿತು. ಇದರೊಂದಿಗೆ ಸ್ವಂತ ಉದ್ಯೋಗದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಾಯಮಾಡುವ ದೃಷ್ಟಿಯಿಂದ ಅರ್ಹ ವ್ಯಕ್ತಿಗಳಿಗೆ ಬತ್ತಿಕಟ್ಟುವ ಯಂತ್ರ, ಹೊಲಿಗೆ ಯಂತ್ರ, ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ದಾನಿಗಳ ಸಹಾಯದಿಂದ ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದ ನೇತೃತ್ವವನ್ನು ಉಡುಪಿ ನಗರಸಭಾ ಸದಸ್ಯರಾದ ವಿಜಯ ಕೊಡವೂರು ಇವರು ವಹಿಸಿದರು. ಇದೇ ಸಂದರ್ಭದಲ್ಲಿ ಉಡುಪಿಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ದಕ್ಷ ಪೋಲೀಸ್ ವರಿಷ್ಠಾಧಿಕಾರಿ ಶ್ರೀಯುತ ಪ್ರಮೋದ್ ಕುಮಾರ್. ಪಿ. ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ ಕೊಡವೂರು ಇವರು, ಜನೋಪಯೋಗೀ ಕಾರ್ಯಕ್ರಮಗಳನ್ನು ಮಾಡುವುದು ಜನ ಪ್ರತಿನಿಧಿಯಾಗಿ ನನ್ನ ಕರ್ತವ್ಯ. ಸಮಾಜದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದು ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಅಸಾಧ್ಯ. ಸಮಾಜದಲ್ಲಿನ ಅನೇಕ ಗಣ್ಯರು ಹಾಗೂ ದಾನಿಗಳ ಸಹಕಾರದಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು. ಇಂತಹ ಸಮಾಜಸ್ನೇಹೀ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ದಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕೆಂಬುದಾಗಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನಿರೀಕ್ಷಕರು ಉಡುಪಿ ನಗರಠಾಣೆ ಇಲ್ಲಿಯ ದಕ್ಷ ಹಾಗೂ ಪ್ರಾಮಾಣಿಕ ಪೋಲೀಸ್ ಅಧಿಕಾರಿಯಾದ ಶ್ರೀಯುತ ಪ್ರಮೋದ್ ಕುಮಾರ್. ಪಿ. ಅವರನ್ನು ಸನ್ಮಾನಿಸಲಾಯಿತು. ವಿಜಯ ಕೊಡವೂರು ಅವರು ಪ್ರಮೋದ್ ಅವರ ದಕ್ಷತೆಯ ಸೇವೆಯನ್ನು ಸ್ಮರಿಸಿ ಶ್ಲಾಘಿಸಿದರು. ಅವರಿಂದಾಗಿ ಉಡುಪಿ ಜಿಲ್ಲೆಯಲ್ಲಿ ಅನೇಕ ಅಕ್ರಮ ಚಟುವಟಿಕೆಗಳು, ಅಪರಾಧಗಳು ನಿಯಂತ್ರಣಕ್ಕೆ ಬಂದಿದ್ದನ್ನು ಶ್ಲಾಘಿಸಿದರು. ಈ ಬದಲಾವಣೆಯನ್ನು ಜನರು ಗುರುತಿಸಿರುವುದಾಗಿಯೂ ಮುಂದೆಯೂ ಉತ್ತಮ ಸೇವೆ ಅವರಿಂದ ಉಡುಪಿ ಜನತೆಗೆ ಸಿಗಲೆಂಬುದಾಗಿ ಹಾರೈಸಿದರು. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವ ಮುಖಾಂತರ ಸಮಾಜ ಪ್ರಾಮಾಣಿಕರನ್ನು ಪ್ರೋತ್ಸಾಹಿಸಬೇಕೆಂಬುದಾಗಿ ಕರೆನೀಡಿದರು.
ಇದೇ ಸಂದರ್ಭದಲ್ಲಿ ಮೋದಿ ಸರಕಾರದ ಸವಲತ್ತುಗಳ ಮಾಹಿತಿ ಕಾರ್ಯಗಾರವೂ ನಡೆಯಿತು.

ಕಾರ್ಯಕ್ರಮದಲ್ಲಿ ಮಠದಬೆಟ್ಟು ಯುವಕ ಸಂಘದ ಅಧ್ಯಕ್ಷರಾದಂತಹ ಉದಯ ಪೂಜಾರಿಯವರು, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್ ಇವರು, ಪ್ರಮೋದ್ ಉಚ್ಛಿಲ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಕೊಡವೂರು CA ಬ್ಯಾಂಕ್ ಅಧ್ಯಕ್ಷರಾದ ನಾರಾಯಣ್ ಬಲ್ಲಾಳ್, ರತ್ನಾಕರ್ ದೇವಾಡಿಗ, ವಿನಾಯಕ್ ರಾವ್ ಅಧ್ಯಕ್ಷರು ಸೇವಾ ಧಾಮ ಕನ್ಯಾಡಿ,ಮತ್ತಿತರರು ಉಪಸ್ಥಿತರಿದ್ದರು.

ಯಶೋದಾಕೇಶವ ಸ್ವಾಗತಿಸಿದರು.ಸ್ವಾತಿ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಬೆಲ್—ಓ—ಸೀಲ್ ಮಜ್ಧೂರ್ ಸಂಘ ಸಂತೆಕಟ್ಟೆ ಇವರು ಈ ಸಂದರ್ಭದಲ್ಲಿ ಒಟ್ಟು 16 ಜನರಿಗೆ ಅಕ್ಕಿವಿತರಣೆಯ
ನೇತೃತ್ವವಹಿಸಿದವರು.

ಹೊಲಿಗೆ ಯಂತ್ರವನ್ನು ನಾಗಲಕ್ಷ್ಮಿ / ಬತ್ತಿ ಕಟ್ಟುವ ಯಂತ್ರ ಶೋಭಾ / ದಿನಸಿ ಕಿಟ್ ಕೃಷ್ಣ / ವೀಲ್ ಚೇರ್/ ದಾನಿಗಳಾದ ನೆರವಿನಿಂದ ಆಶ್ರಯ ಧಾಮಕ್ಕೆ ದಾನಿಗಳ ನೆರವಿನಿಂದ ಧನ ಸಹಾಯ ಮಾಡಲಾಯಿತು.

ಹಾಗೆಯೇ ಮಠದಬೆಟ್ಟು ಯುವಕ ಮಂಡಲ ಮಠದಬೆಟ್ಟು / ಮಹಿಳಾ ಸಮಿತಿ ಕೊಡವೂರು / ಬೆಲ್ – ಓ – ಸೀಲ್ ಮಜ್ದೂರ್ ಸಂಘ ಸಂತೆಕಟ್ಟೆ / ಪ್ರಮೋದ್ ಕುಮಾರ್ ಇವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಹಕಾರ ನೀಡಿದವರೆಲ್ಲರಿಗೂ ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಧನ್ಯವಾದ ಸಮರ್ಪಿಸಲಾಯಿತು.

 
 
 
 
 
 
 
 
 
 
 

Leave a Reply