‘ಸಂಘ ಪರಿಚಯ ವರ್ಗ’ ಸಂಪನ್ನ

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಸಂಘ ಪರಿಚಯ ವರ್ಗ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆಯಿತು .
       
   ಕಾರ್ಯಗಾರ ಕಾಲೇಜಿನ ಡಿಜಿಟಲ್ ಹಾಲ್ ನಲ್ಲಿ ನಡೆಯಿತು.ಜಿಲ್ಲಾ ಸಂಘ ಚಾಲಕರು ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಜಿಲ್ಲೆ  ಶ್ರೀ. ನಾರಾಯಣ ಶಣೈ  ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ.ನಾರಾಯಣ ಶೆಣೈ ಅವರು ‘ವ್ಯಕ್ತಿ ಸಮಾಜ ಸಂಘ ‘ ಈ ವಿಷಯದ ಕುರಿತು ಮಾತನಾಡಿದರು.
       ಸಮಾಜದಲ್ಲಿ ವ್ಯಕ್ತಿ ನಿರ್ಮಾಣದ ಕಾರ್ಯ ಸಂಘದ ಮೂಲಕ ಆಗುತ್ತಿದೆ .ಶಿಕ್ಷಕರಾದ ನಾವು ಸಂಘದ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಮುಂದಿನ ಸಮಾಜದ ಮೇಲೆ ನಿತ್ಯ ನೆರಳು ಬೀರುವ ವ್ಯಕ್ತಿಯಾಗಿ , ಸುಸಂಸ್ಕೃತ ವ್ಯಕ್ತಿಯಾಗಿ ಬಾಳಬೇಕೆಂದು ಆದರ್ಶ ಗುಣವನ್ನು ಬೆಳೆಸಬೇಕೆಂದು ರಾಷ್ಟ್ರಭಕ್ತಿಯನ್ನು ಬೆಳೆಸಬೇಕೆಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
       
ಕಾರ್ಯಗಾರದ ಎರಡನೇ ಅವಧಿಯನ್ನು ಹಿರಿಯ ಪ್ರಚಾರಕರು ರಾಷ್ಟ್ರೀಯ ಸ್ವಯಂಸೇವಕ ಸಂಘ ಶ್ರೀಯುತ .ದಾ.ಮ. ರವೀಂದ್ರ  ಇವರು ನೀಡಿದರು. ಎರಡನೇ ಅವಧಿಯಲ್ಲಿ ” ಸಂಘ ಪರಿಚಯ ” ವಿಷಯದ ಕುರಿತು ಮಾತನಾಡಿದರು . ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ , ಸಂಘದ ಸಂಸ್ಕಾರ ಸಂಸ್ಕೃತಿ ದೇಶದ ಸಂಸ್ಕಾರ ಸಂಸ್ಕೃತಿ ಯಾಗಿದೆ , ದೊಡ್ಡ ವಿಷಯವನ್ನು ಗುರಿಯಾಗಿಟ್ಟುಕೊಂಡು ಇತರರ ಬಾಳಿಗೆ ಬೆಳಗಾಗಬೇಕು ಎಂದು ತಮ್ಮ ಬೌದ್ಧಿಕದಲ್ಲಿ ಹೇಳಿದರು.
   
 ಮೂರನೇ ಅವಧಿಯನ್ನು ಪ್ರಾಂತ ಸಹ ಸೇವಾ ಪ್ರಮುಖ್ ರಾಷ್ಟ್ರೀಯ ಸ್ವಯಂಸೇವಕ ಸಂಘ ಶ್ರೀ .ನ.ಸೀತಾರಾಮ ಇವರು ”  ಸೇವೆ ಮತ್ತು ಸಾಮಾಜಿಕ ಪರಿವರ್ತನೆ ” ಎಂಬ ವಿಷಯದ ಅಡಿ ಮಾತನಾಡಿದರು. ನಮ್ಮ ದೇಶದ ಗುರುತು ಸೇವೆ ಮತ್ತು ಸಮರ್ಪಣೆ. ಜಗತ್ತಿನ ಮುಂದೆ ಭಾರತದ ಗುರುತು ಇದಾಗಿದೆ. ಸೇವೆಯಿಂದ ಆತ್ಮತೃಪ್ತಿ ಉಂಟಾಗುತ್ತದೆ. ಸಾಮಾಜಿಕ ಸೇವಾ ಮಾನಸಿಕತೆಯನ್ನು ಸಂಘ ನೀಡುತ್ತದೆ ಎಂದು ತಮ್ಮ ಬೌದ್ಧಿಕ ದಲ್ಲಿ ಹೇಳಿದರು.
     
ಮಧ್ಯಾಹ್ನದ ನಾಲ್ಕನೇ ಅವಧಿಯನ್ನು ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಶ್ರೀ. ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇವರು ಸಮಾರೋಪ ಬೌದ್ಧಿಕ ನೀಡಿದರು. 
 ” ಕಾರ್ಯಕರ್ತ ಧ್ಯೇಯ  ಸಾಧನೆ ” ಎಂಬ ವಿಷಯದ ಕುರಿತು ಮಾತನಾಡಿದರು.
    ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತವಿಕ  ನುಡಿಯನ್ನು ಅಮೃತ ಭಾರತಿ ಟ್ರಸ್ಟಿನ ಕಾರ್ಯದರ್ಶಿ ಶ್ರೀ .ಗುರುದಾಸ ಶೆಣೈ ಯವರು ಮಾಡಿದರು .ನಿರೂಪಣೆ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ್  ಶ್ರೀ .ವಿಜಯಕುಮಾರ ಶೆಟ್ಟಿ ಮತ್ತು  ಭಾರತ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಮಾಡಿದರು‌.
 ವಿದ್ಯಾಭಾರತಿ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಾದ ಆರ್. ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಮುಂಡಕ್ಕಿನ ಜಡ್ಡು , ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ತ್ಯಾರು , ಶ್ರೀ ಗಣಪತಿ ಕಿರಿಯ ಪ್ರಾಥಮಿಕ ಶಾಲೆ ಪಟ್ಲಾ, ಪಿ.ಆರ್.ಎನ್.ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಗುರೂಜಿ ಮಾತಾಜಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .ಅಮೃತ ಭಾರತಿ ಟ್ರಸ್ಟಿನ ಸದಸ್ಯರು ಶ್ರೀ ವಿಷ್ಣುಮೂರ್ತಿ ನಾಯಕ್, ಶ್ರೀ ಬಾಲಕೃಷ್ಣ ಮಲ್ಯ , ಶ್ರೀಮತಿ ರೇಷ್ಮಾ ಗುರುದಾಸ ಶೆಣೈ ಹೆಬ್ರಿ ಸಂಘದ ಕಾರ್ಯಕರ್ತ ಸುಧೀರ್ ಹೆಬ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply