ಉಡುಪಿ : ನೆರೆ ನೀರಿನ ಸೆಳೆತಕ್ಕೆ ಕೊಚ್ಚಿಹೋದ ಕಾರು! ಮೂವರು ಅಪಾಯದಿಂದ ಪಾರು!

ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕನ್ನರ್ಪಾಡಿಯಲ್ಲಿ ಕಾರೊಂದು ರಸ್ತೆಯಿಂದ ಕೊಚ್ಚಿಹೋಗಿದ್ದು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕನ್ನರ್ಪಾಡಿಯಲ್ಲಿ ಮಳೆ ನೀರು ಸಾಗುವ ತೋಡಿನ ಸಮೀಪ ಸಾಗುತ್ತಿದ್ದ ಕಾರು‌ ಏಕಾಏಕಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದು ಮೂವರು ಪ್ರಯಾಣಿಕರು‌ ಕಾರಿನ ಬಾಗಿಲು ಹೊಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳ‌ ಸಿಬಂದಿ ಕೊಚ್ಚಿಹೋದ ಕಾರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ನಗರ ಸುತ್ತಮುತ್ತಲಿನ ಗುಂಡಿಬೈಲು, ಕಲ್ಸಂಕ, ಮಠದಬೆಟ್ಟು ಭಾಗ ಜಲಾವೃತವಾಗಿವೆ. ಅಗ್ನಿಶಾಮಕ ದಳ ನಿರಂತರ ಕಾರ್ಯಚರಣೆ ನಡೆಸುತ್ತಿದ್ದು ನೆರೆಗೆ ಸಿಲುಕಿದ್ದ ಹಲವರ ರಕ್ಷಣೆ ಮಾಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಸುರಿಯುತ್ತಿದ್ದು ಸಾರ್ವಜನಿಕರು ಎಚ್ಚರ ವಹಿಸಲು ಜಿಲ್ಲಾಡಳಿತ ಸಲಹೆ ನೀಡಿದೆ.

 
 
 
 
 
 
 
 

Leave a Reply