Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಉಡುಪಿ : “ವಿಜಯ ಆಪ್ತ ಸಮಾಲೋಚನಾ ಕೇಂದ್ರ” ಉದ್ಘಾಟನೆ

ಉಡುಪಿ : ಪೇಜಾವರ ಮಠದ ಅಧೀನದಲ್ಲಿರುವ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನ ಉಚಿತ ವಿದ್ಯಾರ್ಥಿನಿಲಯದಲ್ಲಿ ವಿಜಯ ಗಣಪತಿ ನಾಯಕ್ ರ ಸನಿನೆನಪಿಗಾಗಿ “ವಿಜಯ ಆಪ್ತ ಸಮಾಲೋಚನಾ ಕೇಂದ್ರ”ವು ಸಂಸ್ಥೆಯ ಅಧ್ಯಕ್ಷರು ಹಾಗೂ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ಉದ್ಘಾಟನೆಗೊಂಡಿತು. 

ನಂತರ ಶ್ರೀಪಾದರು ನೆರೆದಿದ್ದವರನ್ನು ಉದ್ದೇಶಿಸಿ ತಮ್ಮ ಗುರುಗಳಾದ ಪರಮಪೂಜ್ಯ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಸ್ಥಾಪಿಸಿದ ಈ ಸಂಸ್ಥೆ ಅನೇಕ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗಿದೆ, ಇದರ ಸಹಸಂಸ್ಥೆ ಚೈಲ್ಡ್ ಲೈನ್ ನ ಉದ್ಧೇಶಕ್ಕೆ ಪೂರಕವಾಗಿ ಈ “ವಿಜಯ ಆಪ್ತ ಸಮಾಲೋಚನಾ ಕೇಂದ್ರವು ಕಾರ್ಯನಿರ್ವಹಿಸಲೆಂದು ಆಶಿಸಿದರು. ಕೊಠಡಿಯ ಪ್ರಾಯೋಜಕತ್ವವನ್ನು ನೀಡಿರುವ ಉದ್ಯಮಿ ಗಣಪತಿ ಮರ್ತಪ್ಪ ನಾಯಕ್, ಹೊಸನಗರ ಇವರನ್ನು ಮಂತ್ರಾಕ್ಷತೆಯನ್ನು ನೀಡಿ ಹರಸಿದರು.

ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಸದಸ್ಯ ರಘುರಾಮ ಆಚಾರ್ಯ, ರಾಘವೇಂದ್ರ ರಾವ್, ಎಸ್. ವಿ. ಭಟ್, ಗುರುರಾಜ ಭಟ್, ಸುಬ್ರಹ್ಮಣ್ಯ ಕಾರಂತ, ಚೈಲ್ಡ್ ಲೈನ್ ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!