ಹಿಂದೂ ಪರ ಸಂಘಟನೆಗಳಿಗೆ ಧಮ್ ಇದ್ದರೆ ಲವ್- ಜಿಹಾದ್ ಕಾನೂನು ಜಾರಿಗೆ ತರಲಿ: ಯು.ಟಿ ಖಾದರ್ ಹೊಸ ಸವಾಲ್

ಮಂಗಳೂರು : ಲವ್ –ಜಿಹಾದ್ ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೋಲಿಸ್ ಗಿರಿ ಹೆಚ್ಚಳವಾಗಿದೆ. ಹಿಂದೂ ಪರ ಸಂಘಟನೆಗಳಿಗೆ ದಮ್ ಇದ್ದರೆ ಲವ್- ಜಿಹಾದ್ ಕಾನೂನು ಜಾರಿಗೆ ತರಲಿ ಎಂದು ಶಾಸಕ ಯು.ಟಿ. ಖಾದರ್ ಖಡಕ್ ಸವಾಲ್ ಹಾಕಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಲವ್ -ಜಿಹಾದ್ ಬಗ್ಗೆ ಸುದ್ದಿ ಗೋಷ್ಟಿ ನಡೆಸಲಿಕ್ಕೆ ಸಂಘಟನೆಗಳಿಗೆ ಅನುಮತಿ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ ನೈತಿಕ ಪೋಲಿಸ್ ಗಿರಿ ಹೆಚ್ಚಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಫೂರ್ಣ ಹದಗೆಟ್ಟಿದೆ ಎಂಬ ಆರೋಪವನ್ನು ಮಾಡಿದ್ದಾರೆ.

ಸಣ್ಣ ಮಕ್ಕಳ ಕೈಗೆ ಪಬ್ ಜೀ ಯಂತಹ ಆಟಗಳು ಇಂದು ರಾಜರೋಷವಾಗಿ ದೊರಕಿವೆ. ಈ ಬ್ಯಾನ್ ಆದ ಆಟಗಳು ಮತ್ತೆ ಚಾಲ್ತಿಯಲ್ಲಿರುವುದು ಹೇಗೆ.ಈ ಆಟದಿಂದ ವಿದ್ಯಾರ್ಥಿಗಳ ಮನಸ್ಥಿತಿ ವಿಕಾರವಾಗುತ್ತಿದೆ ಆದ್ದರಿಂದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು, ಹಾಗೆ ಆನ್ ಲೈನ್ ಪಬ್ ಜಿ ನಂತಹ ಗೇಮ್ ನಿಷೇಧ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply