ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮಹಾಸಭೆ

????????????????????????????????????

ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನ 110ನೇ ವಾರ್ಷಿಕ ಸಾಮಾನ್ಯ ಮಹಾಸಭೆಯು ಉಡುಪಿ ಕುಂಜಿಬೆಟ್ಟನಲ್ಲಿರುವ ಶಾರದಾ ಕಲ್ಯಾಣ ಮಂಟಪದಲ್ಲಿ ತಾರೀಖು 10-09-2022ರಂದು ಜರಗಿತು. ಬ್ಯಾಂಕಿನ ವಾರ್ಷಿಕ ಸಾಮಾನ್ಯ ಮಹಾಸಭೆಗೆ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಸ್ವಾಗತಿಸಿ ಬ್ಯಾಂಕಿನ ಪ್ರಗತಿಯ ಬಗ್ಗೆ ಪ್ರಸ್ತಾವನೆಗೈದು ವರದಿ ವಾಚಿಸಿದರು. ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯರವರು ಸಾಮಾನ್ಯ ಮಹಾಸಭೆಯ ನಡವಳಯನ್ನು ಮಂಡಿಸಿದರು.

ಬ್ಯಾಂಕಿನಲ್ಲಿ ಒಟ್ಟು 19,168 ಸದಸ್ಯರಿದ್ದು ಇವರಿಂದ ರೂ.9.35 ಕೋಟಿ ಪಾಲು ಬಂಡವಾಳ, ಬ್ಯಾಂಕಿನ ನಿಧಿ ಮತ್ತು ಮೀಸಲು ನಿಧಿಗಳಲ್ಲ ರೂ.18.38 ಕೋಟಿ ಇದ್ದು, ಸದಸ್ಯರು ಹಾಗೂ ಗ್ರಾಹಕರಿಂದ ರೂ. 258.06 ಕೋಟಿ ಠೇವಣಿ ಪಡೆಯಲಾಗಿದ್ದು, ರೂ.175.14 ಕೋಟಿ ಸಾಲ ಹೊರಬಾಕಿಯಿರುತ್ತದೆ. ದುಡಿಯುವ ಬಂಡವಾಳ ರೂ.288.18 ಇದ್ದು, ರಿಸರ್ವ್ ಬ್ಯಾಂಕಿನ ನಿಯಮಗಳಗನುಸಾರವಾಗಿ ಬ್ಯಾಂಕು ಬಂಡವಾಳ ಹೂಡಿಕೆ ಮಾಡುತ್ತಿದ್ದು 91.44 ಕೋಟಿ ರಾಷ್ಟ್ರೀಯ ಭದ್ರತಾ ಪತ್ರ (Govt. of India Bond) ಹೂಡಿಕೆಯಾಗಿರುತ್ತದೆ. ಲಾಭಗಳಿಕೆಯಲ್ಲಿ ವರ್ಷದಿಂದ ವರ್ಷಕ್ಕೆ
ಪ್ರಗತಿ ಸಾಧಿಸಿದ್ದು ವರ್ಷಾಂತ್ಯಕ್ಕೆ ಕಾನೂನು ಬದ್ಧ ತೆರಿಗೆ ಪಾವತಿಯ ನಂತರ ರೂ.214.54 ಲಕ್ಷ ಲಾಭ ಗಳಸಿ ಸನ್ನದು ಲೆಕ್ಕಪರಿಶೋಧಕರಿಂದ “ಎ
ಶ್ರೇಣಿ ಪಡೆದಿರುತ್ತದೆ. 2021-22ರಲ್ಲಿ ರೂ.2103.65 ಕೋಟಿ ವ್ಯವಹಾರ ನಡೆಸಿದ್ದು ವರ್ಷದಿಂದ ವರ್ಷಕ್ಕೆ ವ್ಯವಹಾರವು ವೃದ್ಧಿಯಾಗುತ್ತಿದೆ.

ಬ್ಯಾಂಕ್ ಪಟ್ಟಣ ಸಹಕಾರ ಬ್ಯಾಂಕ್‌ ವಿಭಾಗದಲ್ಲಿದ್ದು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರದ ವ್ಯಾಪ್ತಿಗೆ ಒಳಪಟ್ಟದ್ದು ಗ್ರಾಹಕರಿಗೆ ₹5.00 ಲಕ್ಷದವರೆಗಿನ ಠೇವಣಿಗಳಗೆ ವಿಮಾ ಭದ್ರತೆಯನ್ನು ಕಲ್ಪಿಸಿದೆ. ಬ್ಯಾಂಕಿನ ಗ್ರಾಹಕರು ಮತ್ತು ಸದಸ್ಯರ ಪೂರ್ಣ ಸಹಕಾರದಿಂದ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ವಿವರಿಸಿದರು.

ಪ್ರಸ್ತುತ ಬ್ಯಾಂಕ್‌ ಸದಸ್ಯರು ಮತ್ತು ಗ್ರಾಹಕರಿಗೆ ಇ-ಸ್ಟಾಂಪಿಂಗ್, PAN ಕಾರ್ಡ್ ಸೌಲಭ್ಯ, ATM ಸೌಲಭ್ಯ, SMS Alert, Swiping Machine ಸೌಲಭ್ಯ, ಠೇವಣಿಗಳಗೆ ವಿಮಾ ಭದ್ರತೆ, IFFCO TOKIO ವಾಹನ ವಿಮೆ, ಸೇಫ್ ಡೆಪಾಸಿಟ್‌ ಲಾಕರ್‌ ವ್ಯವಸ್ಥೆ, ಪ್ರಧಾನ ಮಂತ್ರಿ
ಸುರಕ್ಷಾ ಭೀಮಾ ಯೋಜನಾ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನಾ, ಹಿರಿಯ ನಾಗರೀಕರಿಗೆ ಶೇ:0.50 ಅಧಿಕ ಬಡ್ಡಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಲಿದೆ. ನಗದು ರಹಿತ ಸೇವೆಯನ್ನು ಉತ್ತೇಜಿಸುವುದಕ್ಕೆ RTGS/NEFT/IMPS ಸೌಲಭ್ಯ, ಉಡುಪಿ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳಲ್ಲೇ ಪ್ರಪ್ರಥಮವಾಗಿ UPI ಆಧಾರಿತ ಪಾವತಿ (BHIM) ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ನಮ್ಮ ಬ್ಯಾಂಕಿನಲ್ಲಿ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ (BOM)ನ್ನು ರಚಿಸಲಾಗಿದ್ದು ಇದರಲ್ಲ ಶ್ರೀ ಚಂದ್ರಶೇಖರ ನಾವಡರವರು ಚೇರ್‌ಮನ್ ಆಗಿ, ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯ, ಶ್ರೀ ಪಿ. ರಾಘವೇಂದ್ರ ಭಟ್ , ಶ್ರೀ ವೆಂಕಟೇಶ ಮಿತ್ಯಾಂತಾಯ ಹಾಗೂ CA ಶ್ರೀ ಶ್ರೀಕೃಷ್ಣ ಎಲ್. ಆಚಾರ್ಯರವರು ಸದಸ್ಯರಾಗಿರುತ್ತಾರೆ. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಪಿ. ರಾಘವೇಂದ್ರ ಭಟ್, ನಿರ್ದೇಶಕರುಗಳಾದ ಶ್ರೀ ಜಗನ್ನಾಥ್ ಜಿ, ಶ್ರೀ ಜಯಪ್ರಕಾಶ್ ಭಂಡಾರಿ, ಶ್ರೀ
ದೇವದಾಸ್, ಶ್ರೀ ಭಾಸ್ಕರ ರಾವ್ ಕಿದಿಯೂರು, ಶ್ರೀ ಸೂರ್ಯಪ್ರಕಾಶ್ ರಾವ್ ಎನ್., ಶ್ರೀ ಎನ್. ಪ್ರಹ್ಲಾದ್ ಬಲ್ಲಾಳ್, ಶ್ರೀಮತಿ ಮನೋರಮಾ ಎಸ್. ಮತ್ತು ಶ್ರೀಮತಿ ರೂಪಾ ಮೋಹನ್ ಹಾಗೂ ಮುಖ್ಯ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪರವರು ಉಪಸ್ಥಿತರಿದ್ದರು. ಉತ್ತಮವಾಗಿ ಕಾರ್ಯನಿರ್ವಹಿಸಿದ ಮುಖ್ಯ ಶಾಖೆ, ಕಟಪಾಡಿ ಶಾಖೆ ಹಾಗೂ ಕಿನ್ನಿಮೂಲ್ಯ ಶಾಖೆಗಳಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ
ಪ್ರಶಸ್ತಿಗಳನ್ನು ನೀಡಲಾಯಿತು. ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಎ. ರಾಘವೇಂದ್ರ ಹೆಬ್ಬಾರ್‌ರವರು ಧನ್ಯವಾದ ಸಲ್ಲಿಸಿದರು.
ಶಾಖಾ ವ್ಯವಸ್ಥಾಪಕರಾದ ಶ್ರೀ ಕೆ. ಹರಿಪ್ರಸಾದ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 

Leave a Reply