ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ, ಉಡುಪಿ- ತೆರೆದ ಮನೆ ಕಾರ್ಯಕ್ರಮ

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಚೈಲ್ಡ್ ಲೈನ್-1098 ಉಡುಪಿಯು ತೆರೆದಮನೆ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ನಡೆಯಿತು. ಚೈಲ್ಡ್ ಲೈನ್‍ನ ನಿರ್ದೇಶಕರಾದ ಶ್ರೀಯುತ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಸಂಧ್ಯಾ ಕಾಮತ್, ತಾಲೂಕು ಪಂಚಾಯತ್ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ನಂತರ ಸಂವಾದದಲ್ಲಿ ಶಾಲೆಯ ಮೇಲ್ಚಾವಣಿ ಸಮಸ್ಯೆ, ಆಟದ ಮೈದಾನ, ಶಾಲೆಯ ಶೌಚಾಲಯದ ಸಮಸ್ಯೆ, ಶಾಲಾ ಆವರಣ ಗೋಡೆ, ಶಾಲಾ ಕಟ್ಟಡ ದುರಸ್ಥಿ, ಆಟದ ಸಾಮಗ್ರಿ, ಹಾಗೂ ಅದೇ ಶಾಲೆಯ ವಿದ್ಯಾರ್ಥಿಯ ಮನೆಗೆ ಶೌಚಾಲಯ ವ್ಯವಸ್ಥೆ ಹಾಗೂ ಇತರ ಬೇಡಿಕೆಗಳನ್ನು ಮಕ್ಕಳು ಮತ್ತು ಪೋಷಕರು ಅಧಿಕಾರಿಗಳ ಗಮನಕ್ಕೆ ತಂದರು. ಈ ಎಲ್ಲಾ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸುವುದಾಗಿ ತಿಳಿಸಿದರು


ಚೈಲ್ಡ್ ಲೈನ್-1098 ಉಡುಪಿಯ ವತಿಯಿಂದ ಶಾಲಾ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಯುತ ಸದಾನಂದ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳ ಹಕ್ಕು, ಕರ್ತವ್ಯ ಹಾಗೂ ಕಾಯಿದೆಗಳ ಕುರಿತಾದ ಅರಿವನ್ನು ಮೂಡಿಸಿದರು.


ರೂಪಾ ಶೆಟ್ಟಿ ಅಧ್ಯಕ್ಷರು, ಆತ್ರಾಡಿ ಗ್ರಾಮ ಪಂಚಾಯತ್, ಶ್ರೀಮತಿ ಮಂಜುಳಾ ಕ್ಷೇತ್ರ ಶಿಕ್ಷಣಾಧಿಕಾರಿಗಳು,  ಸಂತೋಷ್ ಜೋಗಿ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಆತ್ರಾಡಿ, ಉಮಾ, ಕ್ಷೇತ್ರ ಸಮನ್ವಯಧಿಕಾರಿಗಳು,  ಪೂರ್ಣಿಮಾಾ, ಅಂಗನವಾಡಿ ಮೇಲ್ವಿಚಾರಕರು ಹಿರೇಬೇಟ್ಟು,  ಡಾ.ನರಸಿಂಹ ನಾಯಕ್ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಆತ್ರಾಡಿ, ರತ್ನಾಕರ ಶೆಟ್ಟಿ ಉಪಾಧ್ಯಕ್ಷರು ಆತ್ರಾಡಿ ಗ್ರಾಮ ಪಂಚಾಯತ್,  ಸುಮಲತಾ ಹಿರಿಯಡ್ಕ ಪೋಲಿಸ್ ಠಾಣಾ ಸಿಬ್ಬಂದಿ,  ಹರಿಣಿ ಶೆಟ್ಟಿ,  ಶಾರದ.ಎಸ್,  ಆತ್ರಾಡಿ ಗ್ರಾಮ  ಪಂಚಾಯತ್ ಸದಸ್ಯೆ ಪ್ರತಿಮಾ, ಸತ್ಯಾನಂದ ನಾಯಕ್, ಅಧ್ಯಕ್ಷರು ಹಳೆವಿದ್ಯಾರ್ಥಿ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ,  ಗುರುರಾಜ್ ಭಟ್, ಸಹ ನಿರ್ದೇಶಕರು ಚೈಲ್ಡ್ ಲೈನ್-1098 ಉಡುಪಿ ಹಾಗೂ ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕು.ತ್ರಿವೇಣಿ ಕಾರ್ಯಕ್ರಮವನ್ನು ನಿರೂಪಿಸಿ ಹಾಗೂ ಶ್ರೀಮತಿ ಲೀಲಾವತಿ, ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಇವರು ವಂದಿಸಿದರು.

 
 
 
 
 
 
 
 
 
 
 

Leave a Reply