ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ

ಉಡುಪಿ, ಕಲ್ಯಾಣಪುರ: ಇಲ್ಲಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 23 ರಂದು 2022-23 ನೇ ಸಾಲಿನ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟವು ನಡೆಯಿತು. ಈ ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಫಾ. ವಲೇರಿಯನ್ ಮೆಂಡೋನ್ಸಾರವರು ಆಗಮಿಸಿ ಕ್ರೀಡಾಪಟುಗಳೆಲ್ಲರಿಗೂ ಶುಭ ಹಾರೈಸಿದರು. ಜಿಲ್ಲಾ ಉಪನಿರ್ದೇಶಕರು, ಜಿಲ್ಲಾ ದೈಹಿಕ ಶಿಕ್ಷಣ ಆಧೀಕ್ಷಕರು, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರು, ಬ್ರಹ್ಮಾವರ ವಲಯದ ಕ್ಷೇತ್ರಶಿಕ್ಷಣಾಧಿಕಾರಿಗಳು, ಐದು ತಾಲೂಕುಗಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು, ತಾಲೂಕು ಹಾಗೂ ಕ್ಲಸ್ಟರ್ ಮಟ್ಟದ ಅಧಿಕಾರಿಗಳು, ಕಲ್ಯಾಣಪುರ ಗ್ರಾಮ ಪಂಚಾಯತ್ ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಮೊದಲಾದ ಅತಿಥಿಗಳೆಲ್ಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಧರ್ಮಭಗಿನಿ ಸಿ. ಶಾಂತಿ ಪ್ರಮಿಳಾರವರು ಬಂದ ಅತಿಥಿಗಳೆಲ್ಲರನ್ನು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪಲ್ಲವಿ ಭಟ್ ಕರ‍್ಯಕ್ರಮವನ್ನು ನಿರೂಪಿಸಿದರೆ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಯುತ ವಿನ್ಸೆಂಟ್ ಮಸ್ಕರೇನಸ್ ವಂದನಾರ್ಪಣೆಗೈದರು.

 
 
 
 
 
 
 
 
 
 
 

Leave a Reply