ಚಂಡಮಾರುತಕ್ಕೆ ಬೋಟ್​ ಸಿಲುಕಿ 8 ಮಂದಿ ನಾಪತ್ತೆ : ಒರ್ವನ ಶವ ಪತ್ತೆ

ಮಂಗಳೂರು: ಎಂಆರ್‌ಪಿಎಲ್‌ಗೆ ಸಂಬಂಧಿಸಿದ ಸಿಂಗಲ್ ಪಾಯಿಂಟ್ ಮೂರಿಂಗ್ ನಿರ್ವಹಣೆ ಮಾಡುವವರ ಬೋಟ್‌ ಒಂದು ಚಂಡಮಾರುತಕ್ಕೆ ಸಿಲುಕಿ ನೀರುಪಾಲಾಗಿದ್ದು 8 ಮಂದಿ ನಾಪತ್ತೆಯಾಗಿದ್ದಾರೆ. ಓರ್ವನ ಮೃತದೇಹ ಕಾಪು ಸಮೀಪ ಪತ್ತೆಯಾಗಿದೆ.

ಮಂಗಳೂರಿನ ನವಮಂಗಳೂರು ಬಂದರಿನಿಂದ ಸುಮಾರು 17 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿರುವ ಎಸ್‌ಪಿಎಂ ಮೂಲಕ ದೊಡ್ಡ ದೊಡ್ಡ ತೈಲ ಹಡಗುಗಳಿಂದ ತೈಲವನ್ನು ಪಡೆಯಲಾಗುತ್ತದೆ. ಇದಕ್ಕೆ ಬೇಕಾದ ನಿರ್ವಹಣಾ ಕೆಲಸಗಳಿಗೆ ಬೋಟ್ ಮೂಲಕ ಔಟ್‌ಸೋರ್ಸ್ ಮಾಡಲಾದ ಸಿಬ್ಬಂದಿ ತೆರಳುತ್ತಾರೆ.ಈ ಕರ್ತವ್ಯ ನಿರ್ವಹಿಸುತ್ತಿದ್ದ 9 ಮಂದಿಯ ತಂಡ ಡಗ್ ಅಲಯನ್ಸ್ ಎಂಬ ದೋಣಿಯಲ್ಲಿ ಶುಕ್ರವಾರ ಎಸ್‌ಪಿಎಂಗೆ ತೆರಳಿತ್ತು. ಅದು ರಾತ್ರಿಯೇ ಹಿಂತಿರುಗಬೇಕಿತ್ತು. 

ಶನಿವಾರ ಬೆಳಗ್ಗೆ ಎಸ್‌ಪಿಎಂನಿಂದ ಬೋಟ್ ಹೊರಟಿದೆ. ಹೊರಟವರು ಮರಳಿ ನವಮಂಗಳೂರು ಬಂದರು ತಲಪಿಲ್ಲ.ಅಂಡರ್ ವಾಟರ್ ಸರ್ವಿಸಸ್ ಎನ್ನುವ ಕಂಪನಿಗೆ ಸೇರಿದ ಸಿಬ್ಬಂದಿ ಇವರು ಎಂದು ತಿಳಿದುಬಂದಿದೆ.

 
 
 
 
 
 
 
 
 

Leave a Reply