ಇಲೆಕ್ಟ್ರಿಕ್  ಕಾರುಗಳ ಬಳಕೆ ದೇಶಕ್ಕೆ ಕೊಡುಗೆ: ಶಾಸಕ ಕೆ.ರಘುಪತಿ ಭಟ್

ಉಡುಪಿ: ಟಾಟಾ ಇಲೆಕ್ಟ್ರಿಕ್ ಕಾರು ಉಡುಪಿಯಲ್ಲಿ ಮೊದಲಬಾರಿ ಲೋಕಾರ್ಪಣೆಗೊಂಡಿದ್ದು, ಇವು ದೇಶದ ಭವಿಷ್ಯದ ವಾಹನ ಗಳಾಗಿವೆ. ಹೀಗಾಗಿ ನಗರದಲ್ಲಿ ಪಿಪಿಪಿ ಮಾಡೆಲ್‌ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದ್ದು, ಇದರ ಭಾಗವಾಗಿ ಅನೇಕ ಕಡೆಗಳಲ್ಲಿ ಇವಿ ಜಾರ್ಜಿಂಗ್ ಸೆಂಟರ್‌ಗಳನ್ನು ಪ್ರಾರಂಭಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಗುಂಡಿಬೈಲಿನಲ್ಲಿ ಟಾಟಾ ಮೋಟಾರ್ಸ್ ಅಧಿಕೃತ ಮಾರಾಟಗಾರ ಸಂಸ್ಥೆ ಆಟೋ ಮ್ಯಾಟ್ರಿಕ್ಸ್ ಶೋರೂಂ ಉದ್ಘಾಟಿಸಿ, ವಿದ್ಯುತ್ ಚಾಲಿತ ನೆಕ್ಸಾನ್ ಇವಿ ಕಾರನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.​ ವಿದ್ಯುತ್‌ಚಾಲಿತ ವಾಹನಗಳ ಬಳಕೆಯಿಂದ ದೇಶಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಆರ್ಥಿಕತೆಗೆ ಪ್ರಯೋಜನವಾಗುತ್ತದೆ.
ಕೇಂದ್ರ ಸರ್ಕಾರ ಸೋಲಾರ್ ಟೆಕ್ನಾಲಜಿಗೆ ಆದ್ಯತೆ ನೀಡುತ್ತಿದ್ದು, ಇದರಿಂದ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್‌ಗೆ ಪರ್ಯಾಯವಾಗಿ ಮಾಲಿನ್ಯ ರಹಿತ ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಬೇಕಿದೆ. ಮಣಿಪಾಲ ನಗರದಲ್ಲಿ 900​ಕ್ಕಿಂತಲೂ ಮಿಕ್ಕಿ ರಿಕ್ಷಾಗಳಿದ್ದು, ಇವೆಲ್ಲವನ್ನೂ ವಿದ್ಯುತ್ ಚಾಲಿತ ವಾಹನಗಳಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.​​

​ಈ ಸಂದರ್ಭದಲ್ಲಿ ​ಆಟೋ ಮ್ಯಾಟ್ರಿಕ್ಸ್ ಸಮೂಹದ ಆಡಳಿತ ನಿರ್ದೇಶಕ ಡಿ.ರಾಜೇಂದ್ರ ಕುಮಾರ್, ನಗರಸಭಾ ಸ್ಥಳೀಯ ಸದಸ್ಯ ಪ್ರಭಾಕರ್ ಪೂಜಾರಿ, ಎರ್ಮಾಳ್ ಬೀಡಿನ ರತ್ನಾಕರ ಅರಸು ಕಿನ್ಯಕ್ಕ ಬಲ್ಲಾಳ್​, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕಪ್ಪೆಟ್ಟು, ಉಪಸ್ಥಿತರಿದ್ದರು. ಸಂಸ್ಥೆಯ ಇನ್ಯೂರೆನ್ಸ್ ವಿಭಾಗ ಮುಖ್ಯಸ್ಥ ಸಂಜಯ ರಾವ್ ​ನಿರೂಪಿಸಿದರು. ಆಟೋ ಮ್ಯಾಟ್ರಿಕ್ಸ್ ​ಸಿಇಒ ಪ್ರದೀಪ್ ಮಯ್ಯ ಪ್ರಸ್ತಾವಿಸಿದರು.
 
 
 
 
 
 
 
 
 
 
 
 
 
 
 

Leave a Reply