ಹಸಿರನ್ನು ಉಸಿರಾಗಿಸಿದ ಹಿರಿಯ ಪತ್ರಕರ್ತ ಶುಭಾಶ್ಚಂದ್ರ ವಾಗ್ಲೆ – ತಾರಾ ಆಚಾರ್ಯ, ಉಡುಪಿ

ಕೊರೋನಾ ಸಂಕಷ್ಟಕಾಲದ ಲಾಕ್ ಡೌನ್ ಸಮಯವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಂಡ ಉಡಪಿಯ ಹಿರಿಯ ಪತ್ರಕರ್ತರೂ.ಉತ್ತಮ ಛಾಯಾಗ್ರಾಹಕರು ಆಗಿರುವ ಸುಭಾಶ್ಚಂದ್ರ ವಾಗ್ಳೆಯವರ ಹಸಿರು, ಸಸ್ಯ ಪ್ರೀತಿಗೆ ನಮ್ಮದೊಂದು ನಮನ. 

ಬೋನ್ಸಾಯ್ ಗಿಡ ( ಗಿಡದಂತೆ ಕಾಣುವ ಕುಬ್ಜ ಮರ) ತಯಾರಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರು,ಈಗಾಗಲೇ ತಮ್ಮ ಮನೆಯಲ್ಲಿ ಹಲವಾರು ವಿದಧ ಮರಗಳ ಬೋನ್ಸಾಯ್ ಗಳನ್ನು ತಯಾರಿಸಿದ್ದಾರೆ.

ಮನೆಯ ಹೊರಾಂಗಣ ಮತ್ತು ಒಳಾಂಗಣ ಎರಡೂ ಸ್ಥಳಗಳಲ್ಲೂ ಅಲಂಕಾರಿಕ ಗಿಡವನ್ನಾಗಿ ಬಳಸಬಹುದಾದ ಈ ಬೋನ್ಸಾಯ್ ಗಿಡಗಳು ನೋಡಲು ಬಹಳ ಸುಂದರವಾಗಿರುತ್ತವೆ. ಬಹಳ ನಾಜೂಕಾಗಿ ಗಿಡಗಳ ಆರೈಕೆ ಮಾಡುವ ಈ ವಿಧಾನದಲ್ಲಿ,ಗೇಣಿನೆತ್ತರದ ಗಿಡದಲ್ಲೇ ಹೂ, ಹಣ್ಣು ಕಾಯಿಗಳೂ ಆಗಿ,ನೋಡಲು ಮರದಂತೆ ಕಾಣುತ್ತವೆ.ಇದನ್ನು ತಯಾರಿಸಲು ಕೂಡಾ ವಿಶೇಷ ಪರಿಣತಿ ಮತ್ತು ತಾಳ್ಮೆ ಬಹಳ ಮುಖ್ಯ.ಇಂತಹಾ ವಿಶಿಷ್ಟ ಕಲೆಯನ್ನು ಕಲಿತು, ಮನೆಯ ಸುತ್ತ ಸುಂದರ ಹೂತೋಟ, ಗಿಡ , ಮರಗಳನ್ನು ನೆಟ್ಟು, ಅದರ ಆರೈಕೆಯಲ್ಲಿ ಮನಸ್ಸಂತೋಷವನ್ನು ಕಾಣುವ ಮುಖಾಂತರ ತಮ್ಮ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಂಡು, ಪರಿಸರ ಕಾಳಜಿ ಹಾಗು ಪರಿಸರ ಪ್ರೇಮವನ್ನು ಮೆರೆಯುತ್ತಿರುವ ವಾಗ್ಳೆ ಯವರಿಗೆ ಸದಾಶಯದ ಹಾರೈಕೆಗಳು.

 

 
 
 
 
 
 
 
 
 
 
 

Leave a Reply