ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ‘ವಿಶ್ವವಜ್ರ’ ಡೈಮಂಡ್ ಪ್ರದರ್ಶನ- ಮಾರಾಟಕ್ಕೆ ಚಾಲನೆ

ಉಡುಪಿ, ಸೆ.26: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಅ.9ರವರೆಗೆ ಹಮ್ಮಿಕೊಳ್ಳಲಾದ ‘ವಿಶ್ವವಜ್ರ’ ಡೈಮಂಡ್ ಜ್ಯುವೆಲ್ಸರಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಪ್ರದರ್ಶನವನ್ನು ಉದ್ಘಾಟಿಸಿದ ಜನತಾ ಫಿಶ್‌ಮಿಲ್ ಮತ್ತು ಆಯಿಲ್ ಪ್ರೊಡೆಕ್ಟ್ ಇದರ ಆಡಳಿತ ಪಾಲುದಾರ ಆನಂದ್ ಸಿ.ಕುಂದರ್ ಮಾತನಾಡಿ, ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿರುವ ಸುಲ್ತಾನ್ ಸಂಸ್ಥೆಯಲ್ಲಿ ವಿದೇಶದಲ್ಲಿ ಸಿಗುವ ಗುಣಮಟ್ಟದ ಚಿನ್ನಾಭರಣ, ಸಂಗ್ರಹಗಳು ಕೂಡ ದೊರೆ ಯುತ್ತವೆ. ಇದರೊಂದಿಗೆ ಜನಪರವಾದ ಕಾರ್ಯಕ್ರಮಗಳನ್ನು ಸಂಸ್ಥೆ ನಡೆಸು ತ್ತಿದೆ. ಈ ಸಂಸ್ಥೆಯು ಮುಂದೆ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು.

ಇಟಾಲಿಯನ್ ಸಂಗ್ರಹವನ್ನು ಉದ್ಯಮಿ ಸಾಧು ಸಾಲಿಯಾನ್, ಸಿಂಗಾಪುರ ಸಂಗ್ರಹವನ್ನು ತೋಳಾರ್ ಓಷಿಯನ್ ಪ್ರೊಡೆಕ್ಟ್ ಪ್ರೈ.ಲಿ.ಇದರ ಆಡಳಿತ ನಿರ್ದೇಶಕ ಡಾ.ಪ್ರಕಾಶ್ ಸಿ.ತೊಲಾರ್, ಬೆಲ್ಜಿಯಂ ಸಂಗ್ರಹವನ್ನು ಮಲ್ಪೆ ಜಾಮೀಯ ಮಸೀದಿ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಫ್ರೆಂಚ್ ಸಂಗ್ರಹ ವನ್ನು ನಾವುಂದ ಮತ್ಸೋದ್ಯಮಿ ಬಶೀರ್ ತೌಫೀಕ್, ಸಾಲಿಟರೆ ಸಂಗ್ರಹವನ್ನು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ, ಸನ್‌ಶೈನ್ ಟ್ರಾವೆಲ್ಸ್‌ನ ಸ್ಥಾಪಕಿ ಸರಿತಾ ಸಂತೋಷ್, ಕೈಯಾ ಲೈಟ್‌ವೇಟ್ ಸಂಗ್ರಹವನ್ನು ತನ್ಮನಿಯಾ ಸಂಗ್ರಹವನ್ನು ಯಾಸ್ಮಿನ್ ತೋಟ ಅನಾವರಣಗೊಳಿಸಿದರು.
ಪ್ರದರ್ಶನದ ಮೊದಲ ಖರೀದಿಯನ್ನು ಗ್ರಾಹಕರಾದ ತಕ್ಷತ್, ರಕ್ಷತ್ ಹಾಗೂ ಜ್ಯೋತಿ ಅವರಿಗೆ ಹಸ್ತಾಂತರಿಸಲಾಯಿತು. ಸುಲ್ತಾನ್ ಸಂಸ್ಥೆಯ ಜನರಲ್ ಮೆನೇಜರ್ ಎ.ಕೆ.ಉನ್ನಿತ್ತನ್, ಪ್ರಾದೇಶಿಕ ಮೆನೇಜರ್ ಸುಮೇಶ್, ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್, ಕಾರ್ಪೊರೆಟ್ ಡೈಮಂಡ್ ಮೆನೇಜರ್ ಅರುಣ್, ಸೇಲ್ಸ್ ಮೆನೇಜರ್ ಇಲಿಯಾಸ್, ಸುಲ್ತಾನ್ ಗೋಲ್ಡ್ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಸುಲ್ತಾನ್ ಗ್ರೂಪ್‌ನ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಅಸಿಸ್ಟೆಂಟ್ ಸೇಲ್ ಮೆನೇಜರ್ ಮುಹಮ್ಮದ್ ಶಾಮೀಲ್ ಖಾದರ್, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಸಾಹೀಲ್ ಝಾಹೀರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
ಇಟಲಿ, ಫ್ರಾನ್ಸ್, ಟರ್ಕಿ, ಯುಎಸ್, ಸಿಂಗಾಪುರ್ ಮತ್ತು ಮಧ್ಯಪ್ರಾಚ್ಯದ ವಿಶೇಷ ಅಂತಾರಾಷ್ಟ್ರೀಯ ಸಂಗ್ರಹಗಳು ಪ್ರದರ್ಶನದ ಪ್ರಮುಖ ಆಕರ್ಷಣೆ ಯಾಗಿವೆ. ಪ್ರದರ್ಶನದಲ್ಲಿ ಡೈಮಂಡ್ನ ಪ್ರತಿ ಕ್ಯಾರೆಟ್ ಮೇಲೆ 8000ರೂ. ರಿಯಾಯಿತಿಯನ್ನು ನೀಡಲಾಗುತ್ತದೆ.

 
 
 
 
 
 
 
 
 

Leave a Reply