ಸರಕಾರಿ ಪ್ರೌಢಶಾಲೆ ವಡ್ಡರ್ಸೆಯ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರದಾನ ಸಮಾರಂಭ

ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಪ್ರಾಯೋಜಿತ ಸರಕಾರಿ ಪ್ರೌಢಶಾಲೆ ವಡ್ಡರ್ಸೆಯ ಇಂಟರ್ಯಾಕ್ಟ್ ಕ್ಲಬ್ ನ 2021-22 ನೇ ಸಾಲಿನ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಇತ್ತೀಚೆಗೆ ಜರುಗಿತು.

ಪದಪ್ರದಾನ ಅಧಿಕಾರಿಯಾಗಿ ರೋಟರಿ ಜಿಲ್ಲಾ ಇಂಟರ್ಯಾಕ್ಟ್ ಸಭಾಪತಿ ರೊ‌. ಜೈವಿಠಲ್ ನೂತನ ಅಧ್ಯಕ್ಷ ನಿಶಾಂತ್ ಮತ್ತು ಕಾರ್ಯದರ್ಶಿ ನಿರಂಜನ್ ಗೆ ಪದಪ್ರದಾನ ಮಾಡಿ ಇಂಟರ್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವೇದಿಕೆಯನ್ನು ಕಲ್ಪಿಸುತ್ತದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸೈಬ್ರಕಟ್ಟೆ ರೋಟರಿಯ ಅಧ್ಯಕ್ಷ ರಾದ ರೊ. ಪ್ರಸಾದ್ ಭಟ್ ರವರು ಈ ಶಾಲೆಯಲ್ಲಿ ಇಂಟರ್ಯಾಕ್ಟ್ ಮೂಲಕ ನಡೆಸುವ ಎಲ್ಲಾ ಕಾರ್ಯಗಳಿಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ವಲಯ ಪ್ರತಿನಿಧಿ ರೊ. ವಿಜಯ ಕುಮಾರ್ ಶೆಟ್ಟಿ, ಇಂಟರ್ಯಾಕ್ಟ್ ವಲಯ ಸಂಯೋಜಕ ರೊ. ರಾಜಾರಾಮ ಐತಾಳ್, ಸ್ಯಾಬ್ರಕಟ್ಟೆ ರೋಟರಿಯ ಇಂಟರ್ಯಾಕ್ಟ್ ಚಯರ್ ಮೆನ್ ರೊ. ವಿಜಯ ಬಳೆಗಾರ್, ರೊ. ನೀಲಕಂಠ ರಾವ್, ರೊ. ರಾಮಪ್ರಕಾಶ್, ರೊ. ಕಿರಣ್, ರೊ. ರಾಜು ಉಪಸ್ಥಿತರಿದ್ದರು.

ರೊ. ಮಾಧವ ಹೆಗ್ಡೆ ಮತ್ತು ರೊ. ರಮಾನಂದ ಆಚಾರ್ ಶಾಲೆಗೆ ನೀಡಿರುವ ಪ್ರಿಂಟರ್ ನ್ನು ಹಸ್ತಾಂತರಿಸಲಾಯಿತು ಹಾಗೂ ಈ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ 4 ವಿದ್ಯಾರ್ಥಿಗಳಿಗೆ ರೊ. ರವೀಂದ್ರನಾಥ ಕಿಣಿ ಯವರು ನೀಡಿರುವ ನಗದು ಪುರಸ್ಕಾರವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಮಾಸ್ಕ್ , ಪೆನ್ ಹಾಗೂ ಸಿಹಿತಿಂಡಿ ವಿತರಿಸಲಾಯಿತು.

ಮುಖ್ಯ ಶಿಕ್ಷಕ ಆನಂದ ಶೆಟ್ಟಿ ಸ್ವಾಗತಿಸಿ, ಇಂಟರ್ಯಾಕ್ಟ್ ನ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕ ಹೆರಿ ಕಾರ್ಯಕ್ರಮ ನಿರೂಪಿಸಿ, ರೋಟರಿ ಕಾರ್ಯದರ್ಶಿ ರೊ. ಅಣ್ಣಯ್ಯ ವಂದಿಸಿದರು.

 
 
 
 
 
 
 
 
 

Leave a Reply