ಯುವ ಕಾಂಗ್ರೆಸ್ ಘಟಕ ಪಕ್ಷದ ಪ್ರಾಮುಖ್ಯ ಅಂಗ​~ ​ಸೊರಕೆ

ಕಾಪು; ಯುವ ಶಕ್ತಿಯೇ ನವ ಭಾರತ ನಿರ್ಮಾಣದ ಪ್ರಮುಖ ಶಕ್ತಿ, ಹಾಗಾಗಿ ಯುವಜನ ಸಬಲೀ ಕರಣಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ, ಭಾರತದ ಇದುವರೆಗಿನ ಅತ್ಯಂತ ಯುವ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದ್ದರು. ಯುವಜನತೆ ಉದ್ಯೋಗಾರ್ಜನೆಗಾಗಿ ಹೋರದೇಶಗಳಿಗೆ ವಲಸೆ ಹೋಗುವುದನ್ನು ಮನಗಂಡು ಭಾರತದಲ್ಲಿಯೇ​ ತಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ಒರೆಗೊಡ್ಡಲು ಅನುಕೂಲವಾಗುವಂತೆ ಮಾಹಿತಿ-ತಂತ್ರಜ್ಞಾನ ಮತ್ತು ದೂರವಾಣಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ತೆರೆದು  ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. 

“ಯುವ-ಭಾರತ, ನವ-ಭಾರತ” ಎಂಬ ಪರಿಕಲ್ಪನೆಗೆ ಕಾಂಗ್ರೆಸ್ ಪಕ್ಷವು ಪೂರಕವಾಗಿ ಹೆಜ್ಜೆ ಹಾಕಿದ್ದು, ಪಕ್ಷ ದಲ್ಲಿಯೂ ಕೂಡ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಯುವ ಕಾಂಗ್ರೆಸ್ ಘಟಕ ಬಲಿಷ್ಠವಾದಷ್ಟು ಕಾಂಗ್ರೆಸ್ ಪಕ್ಷ ಬಲವರ್ಧಿಸುತ್ತದೆ, ಹಾಗಾಗಿ ಯುವ ಕಾಂಗ್ರೆಸ್ ಘಟಕ, ಪಕ್ಷದ ಪ್ರಾಮುಖ್ಯ ಅಂಗ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಯವರು ಹೇಳಿದರು.​ ಅವರು, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯು “ಕಾಪು ರಾಜೀವ್ ಭವನ”ದಲ್ಲಿ ಆಯೋಜಿಸಿದ್ದ ಯುವ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತ ನಾಡುತ್ತಿದ್ದರು.

ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಉಜ್ವಲವಾದ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಅಡಿಪಾಯ​ ​ವಾಗುತ್ತದೆ ಎನ್ನುವುದಕ್ಕೆ ನನ್ನನ್ನೂ ಸೇರಿದಂತೆ ಕೆ. ಪಿ. ಸಿ.ಸಿ ಯ ಹಾಲಿ ರಾಜ್ಯಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು ಸೇರಿ ಹಲವಾರು ನಾಯಕರುಗಳೇ ಸಾಕ್ಷಿ ಎಂದರು.  ಡಿ. ಕೆ. ಶಿವಕುಮಾರ್ ರವರು ರಾಜ್ಯಾಧ್ಯಕ್ಷರಾದ ನಂತರ ಯುವಜನತೆಯಲ್ಲಿ ಒಂದು ರೀತಿಯ ಸಂಚಲನವೇ ಮೂಡಿದ್ದು, ಹೆಚ್ಚು ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷದ ಕಡೆಗೆ ಆಕರ್ಷಿತ​ ​ರಾಗುತ್ತಿದ್ದು, ಕಾಪು ಬ್ಲಾಕ್ ಮಟ್ಟದಲ್ಲಿ ಯುವ ಕಾಂಗ್ರೆಸ್ ಉಸ್ತುವಾರಿ ಅಖಿಲೇಶ್ ಕೋಟ್ಯಾನ್ ರವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಬಲವರ್ಧಿಸುತ್ತಿದೆ ಎಂದರು.

ಯುವ ಕಾಂಗ್ರೆಸ್ ನ ಮುಂದಿನ ಅವಧಿಗೆ ಸದಸ್ಯತ್ವ ಅಭಿಯಾನ ಆರಂಭಗೊಂಡಿದ್ಫು ಕಾಪು ಬ್ಲಾಕ್ ವ್ಯಾಪ್ತಿಯಲ್ಲಿ ದಾಖಲೆ ಮಟ್ಟದ  ಸಂಖ್ಯೆಯಲ್ಲಿ ಸದಸ್ಯತ್ವ ನೋಂದಾವಣೆ ಯಾಗಬೇಕು ಎಂದು ಕರೆಯಿತ್ತು, ಯುವ ಕಾಂಗ್ರೆಸ್ ಸಂಘಟನೆಗೆ ಪಕ್ಧವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡಲಿದೆ ಎಂದರು.​ ಇದೇ ಸಂದರ್ಭದಲ್ಲಿ ಎನ್.ಎಸ್. ಯು. ಐ (ವಿದ್ಯಾರ್ಥಿ ಕಾಂಗ್ರೆಸ್) ನ ಉಡುಪಿ ಜಿಲ್ಲಾ ಘಟಕಕ್ಕೆ ನೂತನವಾಗಿ ಅಧ್ಯಕ್ಷರಾಗಿ ನಿಯೋಜನೆಗೊಂಡ ಸೌರಭ್ ಬಲ್ಲಾಳ್ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

 ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ​ ​ನವೀನಚಂದ್ರ ಸುವರ್ಣ ಮಾತನಾಡಿ ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆ ಬಹು ಪ್ರಾಮುಖ್ಯ​ ​ವಾಗಿದ್ದು ಪರಿಣಾಮಕಾರಿಯಾಗಿ ಸಂಘಟಿಸುವಂತೆ ಕರೆಯಿತ್ತರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿ ಅಖಿಲೇಶ್ ಕೋಟ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.​  

ಕೆ​.ಪಿ.ಸಿ.ಸಿ ಯಿಂದ ನಿಯೋಜಿತ ಕಾಪು ಬ್ಲಾಕ್ ಉಸ್ತುವಾರಿ ಅನಿಲ್ ಕುಮಾರ್, ರಾಜ್ಯ ಯುವ ಕಾಂಗ್ರೆಸ್ ಪ್ರ.ಕಾ.ಅಬ್ದುಲ್ ಅಝೀಜ್ ಹೆಜಮಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಮಾತನಾಡಿದರು.
ಸಭೆಯಲ್ಲಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪ್ರಭಾ.ಬಿ. ಶೆಟ್ಟಿ, ಹಿರಿಯಡ್ಕ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿ ಚರಣ್ ವಿಠ್ಠಲ್ ಕುದಿ, ಮಹಮ್ಮದ್ ನಿಯಾಜ್, ಅಬ್ದುಲ್ ರಶೀದ್, ತಾ. ಪಂ. ಸದಸ್ಯರಾದ ಯು.ಸಿ. ಶೇಖಬ್ಬ, ಮೈಕಲ್ ಡಿಸೋಜ, ರಾಜೇಶ್ ಶೆಟ್ಟಿ ಪಾಂಗಳ,.

ಅಶೋಕ್ ರಾವ್ ಕಟಪಾಡಿ, ಮಾಧವ್ ಪಾಲನ್, ಮಧ್ವರಾಜ್ ಬಂಗೇರ, ಸುನಿಲ್ ಬಂಗೇರ, ನಿತಿನ್, ದೀಪಕ್ ಎರ್ಮಾಳ್, ಕಾರ್ತಿಕ್ ಅಮೀನ್, ಸೊರಕೆಯವರ ಆಪ್ತ ಕಾರ್ಯದರ್ಶಿ ಆಶೋಕ್ ನಾಯರಿ  ಮತ್ತು ಪಕ್ಷದ ಪ್ರಮುಖ ನಾಯಕರು, ಪುರಸಭಾ ಸದಸ್ಯರು, ನಿಕಟ ಪೂರ್ವ ಗ್ರಾಮ್ ಪಂಚಾಯತ್ ಸದಸ್ಯರು, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಯುವ ಕಾರ್ಯ ಕರ್ತರು ಉಪಸ್ಥಿತರಿದ್ದರು. ಪ್ರಭಾಕರ್ ಆಚಾರ್ಯ ಧನ್ಯವಾದವಿತ್ತರು​​

 
 
 
 
 
 
 
 
 
 
 

Leave a Reply