ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ; 122 ನೇ ಭಜನಾ ಸಾಪ್ತಾಹ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ , ಶ್ರೀ ದೇವರ ಸನ್ನಿಧಿಯಲ್ಲಿ ಮಂಗಳವಾರ ಮೊಹೋತ್ಸವಕೆ ದೇವಳದ ಅರ್ಚಕ ವಿನಾಯಕ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು , ಭಜನಾ ಮಂಟಪದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ಭಜನೆ ಆರಂಭ ಗೊಂಡಿತು , ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಇಂದು ಮತ್ಸ್ಯ ಅವತಾರ ಅಲಂಕಾರ ಹಾಗೂ ದೇವಾಲಯಕೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು ಊರ ಪರಊರ ಭಜನಾ ಮಂಡಳಿಗಳಿಂದ ಅಹೋ ರಾತ್ರಿ 7 ದಿನಗಳ ಕಾಲ ನಿರಂತರ ಭಜನೆ ನೆಡೆಯಲಿದೆ.

ದೇವಳದ ಆಡಳಿತ ಮುಕ್ತೇಶ್ವರ ಪಿ ವಿ ಶೆಣೈ , ವಸಂತ ಕಿಣೆ , ರೋಹಿತಾಕ್ಷ ಪಡಿಯಾರ್ , ಪುಂಡಲೀಕ ಕಾಮತ್, ಗಣೇಶ ಕಿಣಿ ,ವಿಶ್ವನಾಥ ಭಟ್ , ವಿವೇಕ ಶಾನ್ ಬೋಗ್ ,ಸತೀಶ್ ಕಿಣಿ , ಭಾಸ್ಕರ ಶೆಣೈ , ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು , ನೂರಾರು ಸಮಾಜ ಬಂದವರು ಉಪಸ್ಥಿತರಿದ್ದರು.

Leave a Reply