Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಪುಟಾಣಿಗಳಿಗೆ ಸಮೂಹ ನೃತ್ಯ ಸ್ಪರ್ಧೆ

ತನ್ನ ವಜ್ರ ಮಹೋತ್ಸವದ ಪ್ರಯುಕ್ತ ಶಿರ್ವ ಮಹಿಳಾ ಮಂಡಲವು ಹಮ್ಮಿಕೊಂಡಿರುವ *ತಿಂಗಳ ಕಾರ್ಯಕ್ರಮ* ಸರಣಿಯ ಕೊನೆಯ ಕಾರ್ಯಕ್ರಮವಾಗಿ ಸಂಭ್ರಮದ ಮಕ್ಕಳ ದಿನಾಚರಣೆ ಇಂದು ಜರುಗಿತು.ಶಿರ್ವ ಮಹಿಳಾ ಮಂಡಲದ ಸಭಾಂಗಣ ಮಹಿಳಾ ಸೌಧದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿಯ ಪುಟಾಣಿಗಳಿಗಾಗಿ ಸಮೂಹ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಈ ಸ್ಪರ್ಧೆಯನ್ನು ಪಡುಬೆಳ್ಳೆ ಶ್ರೀ ನಾರಾಯಣ ಗುರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ.ಎಸ್ .ಅವರು ಜ್ಯೋತಿ ಬೆಳಗಿಸಿ,ಭಾರತದ ಪ್ರಥಮ ಪ್ರಧಾನಿ ದಿ.ಜವಾಹರಲಾಲ್ ನೆಹರೂರವರ ಭಾವಚಿತ್ರಕ್ಕೆ ನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ವಹಿಸಿದ್ದರು.ಆರಂಭದಲ್ಲಿ ಇಂದ್ರಪುರ ಅಂಗನವಾಡಿಯ ಪುಟಾಣಿಗಳು ಪ್ರಾರ್ಥನೆ ಗೈದರು.ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಶ್ರೀಮತಿ ಬಬಿತಾ ಜಗದೀಶ್ ಅರಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು.ಒಟ್ಟು ಹತ್ತು ಅಂಗನವಾಡಿಯ ಪುಟಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು,ವಿಜೇತರ ವಿವರ ಹೀಗಿದೆ.

 1)ಪ್ರಥಮ ಬಹುಮಾನ: ಬಂಟಕಲ್ಲು ಅಂಗನವಾಡಿ ಕೇಂದ್ರ.

2)ದ್ವಿತೀಯ ಬಹುಮಾನ:ಮೇಲ್ ಬೆಳಂಜಾಲೆ ಅಂಗನವಾಡಿ ಕೇಂದ್ರ

3)ತೃತೀಯ ಬಹುಮಾನ:ಶ್ರೀ ದುರ್ಗಾಂಬಿಕಾ ಅಂಗನವಾಡಿ ಕೇಂದ್ರ,ಕೋಡು,ಪಂಜಿಮಾರು 

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶಿರ್ವ,ಇದರ ಅಧ್ಯಕ್ಷರಾದ ಶ್ರೀ ವಿಠ್ಠಲ ಆಂಚನ್, ಮಹಿಳಾ ಮಂಡಲದ ಉಪಾಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ರಕಾಶ್ ಸುವರ್ಣ,ಕಾರ್ಯಕಾರಿ ಸಮಿತಿಯ ಶ್ರೀಮತಿ ಸುನೀತಾ ಸದಾನಂದ್, ಪುಷ್ಪಾ ಆಚಾರ್ಯ,ನಿರಿತಾ ಬಲ್ಲಾಳ್,ದೀಪಾ ಶೆಟ್ಟಿ,ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು,ಪುಟಾಣಿಗಳ ಪೋಷಕರು ಮುಂತಾದವರು ಉಪಸ್ಥಿತರಿದ್ದರು.ಶ್ರೀಮತಿ ಜಯಶ್ರೀ ಜಯಪಾಲ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಮಾಲತಿ ಮುಡಿತ್ತಾಯ ಅವರು ಧನ್ಯವಾದವಿತ್ತರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!