Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಶಿರ್ವ: ತಿಂಗಳ ಸಂಜೀವಿನಿ ಸಂತೆಗೆ ಚಾಲನೆ

ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ಜೀವನೋಪಾಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಸಂಜೀವಿನಿ ಯೋಜನೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಸಂಜೀವಿನಿ ಸಂತೆಯು ಪ್ರತೀ ತಿಂಗಳೂ ಶಿರ್ವದಲ್ಲಿ ನಡೆಯುತ್ತಿದ್ದು, ಆಗಸ್ಟ್ ತಿಂಗಳ ಸಂಜೀವಿನಿ ಸಂತೆಗೆ ಇಂದು ಚಾಲನೆ ನೀಡಲಾಯಿತು.ಶಿರ್ವ ಮಹಿಳಾ ಮಂಡಲದ ಮಹಿಳಾ ಸೌಧದಲ್ಲಿ ನಡೆಯುವ ಈ ಸಂತೆಗೆ ಶಿರ್ವ ಗ್ರಾಮ ಪಂಚಾಯತ್ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಗ್ರೇಸಿ ಕಾರ್ಡೋಜ, ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿಠ್ಠಲ ಆಂಚನ್,ಶಿರ್ವ ರೋಟರಿಯ ಶ್ರೀ ವಿಲಿಯಂ ಮಚಾದೋ,ಕುಬೇರ ಎಂಟರ್ಪ್ರೈಸಸ್ ಇದರ ಮಾಲೀಕರಾದ ಶ್ರೀ ಹರಿಪ್ರಸಾದ್ ಸಾಲಿಯಾನ್ ಇವರು ಜ್ಯೋತಿ ಬೆಳಗಿಸುವ ಮೂಲಕ ಸಂಜೀವಿನಿ ಸಂತೆಗೆ ಚಾಲನೆ ನೀಡಿದರು.ಗೌರೀ ತೃತೀಯ ದ ಶುಭವಸರದಲ್ಲಿ ನಡೆಯುತ್ತಿರುವ ಈ ಸಂತೆಯು ಯಶಸ್ವೀಯಾಗಿ ನಡೆಯಲಿ,ತನ್ಮೂಲಕ ಮ‌ಹಿಳೆಯರ ಸ್ವಾವಲಂಬನೆಗೆ ದಾರಿಯಾಗಲಿ ಎಂಬ ಹಾರೈಕೆಯಯನ್ನು ಅತಿಥಿಗಳು ಮಾಡುವುದರೊಂದಿಗೆ ಪ್ರತೀ ತಿಂಗಳೂ ಈ ಸಂಜೀವಿನಿ ಸಂತೆ ಉತ್ತಮವಾಗಿ ನಡೆಯುವಲ್ಲಿ ಗ್ರಾಮಸ್ಥರೂ ಸಂತೆಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸಹಕರಿಸಬೇಕು ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀ ಗಿರಿಧರ್ ಪ್ರಭು, ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ್ ರಾವ್,ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಶಾರದೇಶ್ವರಿ ಗುರ್ಮೆ, ಶಿರ್ವ ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಶ್ರೀಮತಿ ಸುಪ್ರೀತಾ ಸಾಲಿಯಾನ್,ಮಜೂರು ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಶೈಲಜಾ ನಾರಾಯಣ ಪೂಜಾರಿ, ಶಿರ್ವ ಒಕ್ಕೂಟದ ಮುಖ್ಯ ಬರಹಗಾರರಾದ ಶ್ರೀಮತಿ ಶ್ವೇತಾ, ಸಂಪನ್ಮೂಲ ವ್ಯಕ್ತಿಗಳಾದ ಶಿರ್ವದ ಸುಜಾತಾ,ಶಶಿಕಲಾ, ಸಂಗೀತಾ,ಇನ್ನಂಜೆಯ ಶ್ರೀಮತಿ ಲಕ್ಷ್ಮೀ,ಮಜೂರಿನ ಶ್ರೀಮತಿ ನಳಿನಾಕ್ಷಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.ಕಾಪು ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.ಶಿರ್ವ ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ಆಶಾ ಆಚಾರ್ಯ ಧನ್ಯವಾದವಿತ್ತರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!