ಯಾರೂ ನ್ಯಾಯ ವಂಚಿತರಾಗ ಬಾರದು~ ರಾಷ್ಟ್ರೀಯ ಮಹಿಳಾ ಆಯೋಗ

ಮಂಗಳೂರು: ಸೈಬರ್ ಕ್ರೈಂ, ಕಿರುಕುಳ ಸೇರಿದಂತೆ ಹಲವು ರೀತಿಯ ದೂರುಗಳನ್ನು ಹೊತ್ತು ಪೊಲೀಸ್ ಠಾಣೆಗೆ ಬರುವ ಮಹಿಳೆಯರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಅಂತೇಯೆ ನೈತಿಕ ಬಲ ತುಂಬುವ ಕೆಲಸವನ್ನು ಪೊಲೀಸರು ಮಾಡಿ, ನೊಂದ ಮಹಿಳೆಯರಿಗೆ ಸರಿಯಾದ ನ್ಯಾಯ ದೊರೆಯುವಂತೆ ಮಾಡಬೇಕು. ಯಾರು ನ್ಯಾಯ ವಂಚಿತರಾಗ ಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಹೇಳಿದ್ದಾರೆ.ಹೀಗೆ ಸಮಸ್ಯೆಗಳಿಂದ ನೊಂದ ಮಹಿಳೆಯರು ಠಾಣೆಗೆ ಬಂದಾಗ ಅವರಿಗೆ ಸರಿಯಾದ ಸಾಂತ್ವನದೊಂದಿಗೆ ಧೈರ್ಯ ನೀಡಿದರೆ ಹೆಚ್ಚು ಮಹಿಳೆಯರು ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗುತ್ತಾರೆ. ಇದರ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಡಿಜಿಪಿಯವರ ಜೊತೆಗೂ ಚರ್ಚಿಸಿದ್ದು, ಅವರು ಸರಿಯಾಗಿ ಸ್ಪಂದಿಸಿದ್ದಾರೆ. ಅದರೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿಯೂ ಹೇಳಿದ್ದಾರೆ ಎಂದು ತಿಳಿಸಿದರು.ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ತನ್ನ ಕಾರ್ಯ ಆರಂಭಿಸಿದೆ. ಮಹಿಳೆಯರು ತಮ್ಮ ದೂರುಗಳನ್ನು ಈ ಕೇಂದ್ರಗಳಲ್ಲಿ ದಾಖಲಿಸಿ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಉಡುಪಿ, ದ.ಕ. ಸೇರಿದಂತೆ 4 ಜಿಲ್ಲೆಗಳಲ್ಲಿ ಈ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ ಇಲ್ಲಿ ನೊಂದ ಮಹಿಳೆಯರಿಗೆ ವೈದ್ಯಕೀಯ ನೆರವು, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ಕಾನೂನು ಸಲಹೆ, ತಾತ್ಕಾಲಿಕ ವಸತಿಯಂತಹ ಸೇವೆಗಳು ದೊರೆಯಲಿವೆ ಎಂಬ ಮಾಹಿತಿಯನ್ನು ಶ್ಯಾಮಲಾ ಕುಂದರ್ ನೀಡಿದರು.

 
 
 
 
 
 
 
 
 
 
 

Leave a Reply