ನಾಳೆಯಿಂದ ಉಡುಪಿಯ 35 ಪಂಚಾಯಿತಿಗಳು ಸೀಲ್ ಡೌನ್, ಅಗತ್ಯ ವಸ್ತು ಖರೀದಿಗೂ ಇಲ್ಲ ಅವಕಾಶ

ಉಡುಪಿ: ಉಡುಪಿ ಜಿಲ್ಲೆಯ 35 ಗ್ರಾ. ಪಂ. ಗಳು ನಾಳೆಯಿಂದ ಐದು ದಿನಗಳ ಕಾಲ ಸಂಪೂರ್ಣ ಸೀಲ್ ಡೌನ್ ಆಗಲಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಈ ಪ್ರದೇಶಗಳಲ್ಲಿ ಮುಂದಿನ ಐದು ದಿನಗಳ ಕಾಲ ಅಗತ್ಯ ವಸ್ತು ಖರೀದಿಗೂ ಕೂಡ ಅವಕಾಶ ಇರುವುದಿಲ್ಲ. ಕೇವಲ ಹಾಲು, ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳಿಗೆ ಮಾತ್ರ ಅವಕಾಶವಿದೆ ಎಂದು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

ಈ ಬಗ್ಗೆ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಜನಪ್ರತಿನಿಧಿಗಳ ಜೊತೆ ಸೇರಿ ನಿನ್ನೆ ಈ ನಿರ್ಣಯ ಕೈಗೊಂಡಿದ್ದೇವೆ. ಐವತ್ತಕ್ಕೂ ಹೆಚ್ಚು ಪಾಸಿಟಿವ್ ಇರುವ ಗ್ರಾ.ಪಂ.ಗಳಲ್ಲಿ ನೋಡಿಕೊಳ್ಳಲು ಅಗತ್ಯ ಕಾರ್ಯ ಪಡೆ ರಚಿಸಿದ್ದೇವೆ. ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗಲೇಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply