ಎನ್.ತಿರುಮಲೇಶ್ವರ ಭಟ್ ಇವರಿಗೆ ಸಾಹಿತ್ಯದ ಒಸಗೆ

13 ನೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರಾಗಿ ಪ್ರೊ. ಎನ್ . ತಿರುಮಲೇಶ್ವರ ಭಟ್ ಅವರನ್ನು ಅವರ ಸ್ವಗೃಹದಲ್ಲಿ ನವೆಂಬರ್ 7ರಂದು ವೀಳ್ಯ ಕೊಡುವ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.

ನವೆಂಬರ್ 25 ಮತ್ತು 26ರಂದು ಉಡುಪಿ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯುವ 13ನೇ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಎರಡು ದಿನ ಬಹಳ ಅದ್ದೂರಿಯಾಗಿ ನಡೆಸಲಾಗುವುದು ಎಂದು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್. ಪಿ ತಿಳಿಸಿದರು . 

ಈ ಸಂದಭ೯ದಲ್ಲಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ , ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾಗಿದ್ದ ಡಾ. ಗಣನಾಥ್ ಎಕ್ಕಾರು, ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಭಂಡಾರಿ , ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳಾದ ಭುವನ ಪ್ರಸಾದ್ ಹೆಗ್ಡೆ, ಡಾ. ನಿಕೇತನ, ಮೋಹನ್ ಉಡುಪ , ಪೂರ್ಣಿಮಾ ಜನಾದ೯ನ್ , ನರಸಿಂಹಮೂರ್ತಿ ,ರಾಜೇಶ್ ಭಟ್ ಪಣಿಯಾಡಿ ,ಡಾ. ಪ್ರವೀಣ್ , ಎನ್.ಟಿ ಭಟ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Leave a Reply