ಹೃದಯ, ಮನ,ಪರಿವರ್ತನೆಗೆ ಸಕಾಲ, ರಮಝನ್ ಮಾಸ

ಕಾಪು : ಪವಿತ್ರ ಕುರ್ ಆನ್ ಅವತ್ತೀರ್ಣಗೊಂಡ ಪವಿತ್ರ ಮಾಸ ರಂಝಾನ್ ಆಗಿದ್ದು , ಈ ಗ್ರಂಥದಲ್ಲಿರುವ ಬೋಧನೆಯನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡ್ಡಾಗ ಮಾತ್ರ ತನ್ನ ಜೀವನವನ್ನು ಅರಿ ಷಡ್ ವೈರಿಗಳಿಂದ ಪರಿವರ್ತಿಸಿಕೊಳ್ಳಲು ಸಾಧ್ಯ.

ಮನುಷ್ಯ ಎಷ್ಟೇ ಆರಾಧನೆ ಮಾಡಿದರೂ, ಧರ್ಮ ನಿಷಿದ್ದ ಸಂಪಾದನೆಯಿಂದ ಹೊರ ಬರದಿದ್ದರೆ ಆತನು ನರಕಕ್ಕೆ ಹೋಗುತ್ತಾನೆ ಎಂದು ಮಲ್ಪೆ ಮಸ್ಜಿದ್ ನ ಧರ್ಮ ಗುರುಗಳಾದ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಅವರು , ಕೊಂಬಗುಡ್ಡೆ ತೌಹೀದ್ ಮಂಝಿಲ್ ನಲ್ಲಿ ಜಮಾ ಅತೆ ಇಸ್ಲಾಮಿ ಕಾಪು ವರ್ತುಲ ಹಮ್ಮಿಕೊಂಡ ರಮಝನ್ ಸ್ವಾಗತ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ ಹೇಳಿದರು.

ಮನುಷ್ಯ ಹೃದಯಶುದ್ಧಿಯೊಂದಿಗೆ ದೇವನ ಭಯದೊಂದಿಗೆ ಆರಾಧನೆ ಮಾಡಿ ತನ್ನ ಜೀವನ ಸಾಗಿಸಿದಾಗ ಮಾತ್ರ ಆತನ ಪ್ರಾರ್ಥನೆಗಳು ಸ್ವೀಕೃತಗೊಳ್ಳುತ್ತವೆ. ದೇವಭಕ್ತಿ ಯನ್ನು ನವೀಕರಿಸಿಕೊಳ್ಳಲು ರಮಝನ್ ಮಾಸ ಸಕಾಲ ಆಗಿದ್ದು, ಅದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.


ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ , ಜಮಾ ಅತೆ ಇಸ್ಲಾಮಿ ಹಿಂದ್ ಈ ರಾಷ್ಟ್ರದಲ್ಲಿ ಶಾಂತಿ , ಸೌಹಾರ್ದತೆಯನ್ನು ಕಾಪಾಡಿಕೊಂಡು ಬಾಳಲು ಕರೆ ನೀಡುತ್ತಾ, ಎಲ್ಲಾ ಸಮುದಾಯದವರ ಕಷ್ಟ , ಸುಖದಲ್ಲಿ ಭಾಗಿಯಾಗಿ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ ದೇವ ಸಂಪ್ರೀತಿಯನ್ನು ಗಳಿಸಲು ಬಯಸುತ್ತದೆ ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳುತ್ತಾ, ಬಂದ ಅತಿಥಿಗಳನ್ನು ಸ್ವಾಗತಿಸಿದರು.ಹಾಫಿಜ್ ಮೆಹರಾಜ್ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭ ಅಯಿತು.ಮುಹಮ್ಮದ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply