ಸ್ವಾತಂತ್ರ್ಯೋತ್ಸವದಲ್ಲಿ ಮನಸೆಳೆದ ಪೋರಿ..ಉಡುಪಿಯ ಪುಟ್ಟ ಮಯೂರಿ..

ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಾಭಿಮಾನದ ಕೆಚ್ಚನ್ನು…ದೇಶ ಭಕ್ತರ ಕಥೆಗಳನ್ನು, ಆಧ್ಯಾತ್ಮಿಕ ಮೌಲ್ಯಗಳನ್ನು ಮಕ್ಕಳ ಮನದಲ್ಲಿ ತುಂಬುವುದು ಸತ್ ಸಂಪ್ರದಾಯ ‌.ಅದನ್ನು ಅಷ್ಟೇ ಆಸಕ್ತಿಯಿಂದ ಕೇಳುವ ಮನಸ್ಸು  ಇದ್ದಾಗ  ಇಬ್ಬರಿಗೂ ಸಮಾಧಾನ. ಸುಶಿಕ್ಷಿತ ತಾಯಿ ತಂದೆ ಬಿಡು ವಾದಾಗೆಲ್ಲ ತಮ್ಮ‌ ಮನೆಯಲ್ಲಿ ಮಕ್ಕಳಿಗೆ ಇಂತಹ ವಾತಾವರಣ ಕಲ್ಪಿಸಿದಾಗ ಮಕ್ಕಳು ತಾವೇ ಅಂತಹ ಪಾತ್ರಗಳಾಗಿ ಸಂಭ್ರಮಿ ಸುತ್ತಾರೆ. ನಿತ್ಯ ರಾಮಾಯಣ, ಮಹಾಭಾರತ ,ವೀರ ಯೋಧರು, ದೇಶ ಭಕ್ತರ ಕಥೆಗಳನ್ನು‌ ಕೇಳುತ್ತಾ ಬಂದ ಪುಟ್ಟ ಮಯೂರಿಯ ಕಥೆಯೂ ಅದೇ…ತಾನೇ ಅಂತಹ ಆದರ್ಶ ಪಾತ್ರವೆಂದು ಕಲ್ಪನೆ ಮಾಡುತ್ತಾ ತನಗೂ ಅಂತಗುದೇ ವೇಷಭೂಷಣ ಹಾಕು ಎಂದು ತಾಯಿ ಶ್ರೀ ದೇವಿಯನ್ನು ಪೀಡಿಸುತ್ತಾ,ತಂದೆ ರಾಘವೇಂದ್ರ ಪ್ರಭುಗಳೊಂದಿಗೆ ಸುತ್ತಾಡುವುದು ಆಕೆಯ ನೆಚ್ಚಿನ ಹವ್ಯಾಸ.
ಹಲವಾರು ಕಥೆಗಳನ್ನು‌ ತನ್ನ ಬಾಲ ಭಾಷೆಯಲ್ಲಿ  ತನ್ನದೇ ಅಭಿನಯದೊಂದಿಗೆ ಪ್ರಸ್ತುತ ಪಡಿಸುವ ಇವಳ ಸ್ಮರಣ ಶಕ್ತಿ ಕೂಡಾ ಮೆಚ್ಚು ವಂತಹದ್ದು . ದೂರದರ್ಶನಗಳಲ್ಲಿ ಬಿತ್ತರಗೊಳ್ಳುವ ಹಲವಾರು ಆಧ್ಯಾತ್ಮಿಕ ಧಾರಾವಾಹಿಗಳನ್ನು ನೋಡುತ್ತ ಸುಲಲಿತ ಹಿಂದಿ ಮಾತನಾಡುವ ಹಾಗು ತನ್ನ ಸಮವಯಸ್ಕರಿಗೆ ಕಥೆ ಹೇಳುವ ಇವಳ ಜಾಣ್ಮೆ ಸ್ತುತ್ಯರ್ಹ.ಈಕೆ  ಇಂದು ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪೊಲೀಸ್ ಸಮವಸ್ತ್ರ ತೊಟ್ಟಿದ್ದ ಮೂರು ವರ್ಷದ  ಮಯೂರಿ ಎಲ್ಲರ ಆಕಷರ್ಣೆಯ ಕೇಂದ್ರವಾಗಿದ್ದಳು

 

ಉಡುಪಿ ಪ್ರಧಾನ ಅಂಚೆ ಕಚೇರಿಯ ತ್ವರಿತ ಅಂಚೆ ಪೇದೆ  ಬೆಳ್ವೆಯ ರಾಘವೇಂದ್ರ ಪ್ರಭು ಹಾಗು ಶ್ರೀದೇವಿ ದಂಪತಿಗಳ  ಪುತ್ರಿ ಮಯೂರಿಗೆ ಪೊಲೀಸ್, ಮಿಲಿಟರಿ ಅಂದರೆ ಅಚ್ಚುಮೆಚ್ಚು. ಸದಾ ಪೊಲೀಸ್ ಸಮವಸ್ತ್ರ ಹಾಕುವಂತೆ ಹಠ ಹಿಡಿಯುವ ಈಕೆಗೆ ರಾಘವೇಂದ್ರ ಪ್ರಭು, ಸ್ವಾತಂತ್ರೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಪೊಲೀಸ್ ಸಮವಸ್ತ್ರ ತೊಡಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು. ಇಡೀ ಕಾರ್ಯಕ್ರಮದಲ್ಲಿ ಪೊಲೀಸರೊಂದಿಗೆ ಇದ್ದ ಈಕೆ ಎಲ್ಲರ ಗಮನ ಸೆಳೆದಳು. ಪೊಲೀಸರು, ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಹೆಚ್ಚಿನವರು ಆಕೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

 
 
 
 
 
 
 
 
 
 
 

Leave a Reply