ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಡಬ್ಲ್ಯೂ.ಪಿ.ಐ. ವತಿಯಿಂದ ಪ್ರತಿಭಟನೆ

ಕಾಪು :ಒಂದು ಕಡೆ ಕೊರೋನ ಪಿಡುಗು ಮತ್ತೊಂದು ಕಡೆ ಅಗತ್ಯ ವಸ್ತುಗಳಾದ ಡೀಸೆಲ್, ಪೆಟ್ರೋಲ್,ಗ್ಯಾಸ್,ವಿದ್ಯುತ್ ಹಾಗೂ ಇನ್ನಿತರ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೆ ಏರಿ ಜನರು ಜೀವನ ಸಾಗಿಸುವುದು ದುಸ್ತರವಾಗಿದೆ.

2014 ರಲ್ಲಿ ಅಚ್ಚೇ ದಿನ್ ಗಳ ಕನಸನ್ನು ಬಿತ್ತಿ ಅಧಿಕಾರಕ್ಕೆ ಬಂದ ಸರಕಾರ ಇಂದು ಈ ರೀತಿ ಜನರನ್ನು ದೋಚುವುದು ಸರಿಯಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಮಾಜಿ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿÙ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.ರಾಜ್ಯಾದ್ಯಂತ ಪಕ್ಷವು ಹಮ್ಮಿಕೊಂಡ ಕಾರ್ಯಕ್ರಮದಂತೆ ಕಾಪು ಹೃದಯ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಅವರು ಮಾತಾಡಿದರು.

2014 ರ ದಿನಗಳು ಕೆಟ್ಟ ದಿನಗಳು , ಈಗಿನ ದಿನಗಳು ಅಚ್ಚೇ ದಿನ್ ಗಳು ಎಂದು ಈಗಿನ ಆಡಳಿತ ಪಕ್ಷವು ತಿಳಿದಿದ್ದರೆ ನಮಗೆ ಅಂದಿನ ಕೆಟ್ಟ ದಿನಗಳೇ ಇರಲಿ ಎಂದು ಸರಕಾರದ ಮುಂದೆ ಬೇಡಿಕೆ ಇಟ್ಟರು.

ಉಡುಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಜೀಜ್ ಉದ್ಯಾವರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರುಖ್ ತೀರ್ಥಹಳ್ಳಿ ,ರಾಜ್ಯ ಮಾಜಿ ಕಾರ್ಯದರ್ಶಿ ರಿಯಾಜ್ ಕುಕ್ಕಿಕಟ್ಟೆ,ಅಬ್ದುರ್ರಹಮಾನ್ ಉದ್ಯಾವರ , ಮುಹಮ್ಮದ್ ಇಕ್ಬಾಲ್ ಮಜೂರ್,ಮುಹಮ್ಮದ್ ಅಲಿ ಕಾಪು,ಫಾರಿಸ್, ಆರೀಫ್,ಸಾಹಿಲ್,ಅಬ್ದುಲ್ ಸತ್ತಾರ್ ಅಬ್ದುಲ್ ಅಹದ್,ಮುಹಮ್ಮದ್ ಅವೇಜ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply